News Karnataka Kannada
Monday, April 29 2024
ಸಾಂಡಲ್ ವುಡ್

ಜೂನ್ 17ರಂದು ರಾಜ್ಯಾದ್ಯಂತ ಮೇಡ್ ಇನ್ ಚೈನಾ ಸಿನಿಮಾ ಬಿಡುಗಡೆ

Made In China
Photo Credit :

ಬೆಂಗಳೂರು: ‘ಮೇಡ್ ಇನ್ ಚೈನಾ’, ಕನ್ನಡದ ಮೊದಲ ವರ್ಚ್ಯುಯಲ್ ಸಿನಿಮಾ, ಜೂನ್ 17 ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆಯಾಗುತ್ತಿದೆ. ವರ್ಚ್ಯುಯಲ್ ಎಂದರೆ ಆರಂಭದಿಂದ ಕೊನೆಯವರೆಗೂ ವಿಡಿಯೋ ಕಾಲ್ ಮೂಲಕವೇ ಚಿತ್ರ ಸಾಗುತ್ತದೆ.

ಈ ಚಿತ್ರದಲ್ಲಿ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆ ಆಗಿದೆ. ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಕರೊನಾ ಹೆಚ್ಚಾಗಿ ಲಾಕ್​ಡೌನ್ ಘೋಷಣೆಯಾಗುತ್ತದೆ. ಕೋವಿಡ್ ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದ ಕಾರಣ, ಆತನ ಮನೆಯನ್ನು ಸೀಲ್​ಡೌನ್ ಮಾಡಲಾಗುತ್ತದೆ. ಗರ್ಭಿಣಿ ಹೆಂಡತಿಯನ್ನು ನೋಡುವುದಕ್ಕೆ ಬೆಂಗಳೂರಿಗೆ ಬರಬೇಕಿದ್ದವನು, ಅಲ್ಲೇ ಉಳಿಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಆತ ಅನುಭವಿಸುವ ದುಗುಡ ಮತ್ತು ತೊಳಲಾಟವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಸಾಫ್ಟ್​ವೇರ್ ಉದ್ಯೋಗಿಯ ಪಾತ್ರದಲ್ಲಿ ‘ಇಕ್ಕಟ್’ ಭೂಷಣ್ ಕಾಣಿಸಿಕೊಂಡರೆ, ಅವರ ಪತ್ನಿಯಾಗಿ ಪ್ರಿಯಾಂಕಾ ಅಭಿನಯಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿರುವವರು ಪ್ರೀತಂ ತೆಗ್ಗಿನಮನೆ. ‘ಮೇಡ್ ಇನ್ ಚೈನಾ’ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾ ದಡಿ ಟಿ.ಆರ್. ಚಂದ್ರಶೇಖರ್ ಮತ್ತು ನಂದಕಿಶೋರ್ ನಿರ್ವಿುಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು