News Karnataka Kannada
Friday, May 10 2024
ಸಾಂಡಲ್ ವುಡ್

ಮಗ-ಸೊಸೆ ವಿರುದ್ಧ ದೂರು ದಾಖಲಿಸಿದ ಕನ್ನಡ ಹಿರಿಯ ನಟಿ

shyamala-devi
Photo Credit : Wikipedia

ಕನ್ನಡದ ಲೆಜೆಂಡರಿ ನಿರ್ದೇಶಕ ಸಿದ್ಧಲಿಂಗಯ್ಯ ಅಭಿಮಾನಿಗಳನ್ನು ಅಗಲಿ 8 ವರ್ಷಗಳಾಗಿವೆ. ಅವರ ಪತ್ನಿ ಶ್ಯಾಮಲಾ ದೇವಿ ಮಗನೊಂದಿಗೆ ವಾಸವಿದ್ದರು. ಆದ್ರೀಗ ಮಗ ಹಾಗೂ ಸೊಸೆಯಿಂದ ಮಾನಸಿಕ ಕಿರುಕುಳ ಆಗುತ್ತಿದೆ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಳೆದ 5 ವರ್ಷಗಳಿಂದ ತಮ್ಮದೇ ಮನೆಯಲ್ಲಿ ಮಗ-ಸೊಸೆಯಿಂದ ಕಿರುಕುಳ ಅನುಭವಿಸುತ್ತಿದ್ದು, ತಮ್ಮದೇ ಮನೆಯಲ್ಲಿ ಬಂಧಿಯಾಗಿರುವುದಾಗಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ. ಹಿರಿಯ ನಟಿ ಶ್ಯಾಮಲಾದೇವಿ ಪ್ರಕಾರ, ಇವರ ಹೆಸರಿನಲ್ಲಿ ಮನೆಯಿದೆ. ಆ ಮನೆಯ ಮೇಲೆ ಮಗ ಹಾಗೂ ಸೊಸೆಯ ಕಣ್ಣು ಬಿದ್ದಿದೆ. ಹೀಗಾಗಿ ತಮ್ಮ ಹೆಸರಿಗೆ ಮಾಡಿಕೊಡುವಂತೆ ದಿನ ನಿತ್ಯ ಕಿರುಕುಳ ನೀಡುತ್ತಿದ್ದಾರೆಂದು ಮಗ ಹಾಗೂ ಸೊಸೆಯ ಮೇಲೆ ಆರೋಪ ಮಾಡಿದ್ದಾರೆ.

ಈ ಹಿಂದೆ ಕೂಡ ಇಂತಹದ್ದೇ ಘಟನೆ ನಡೆದಿತ್ತು. ಶ್ಯಾಮಲಾ ದೇವಿಯವರು ಹಿರಿ‌ಯ ನಾಗರಿಕರ ವೇದಿಕೆಗೆ ದೂರು ನೀಡಿದ್ದರು. ಆ ಬಳಿಕ ಮಗ ಸೊಸೆಯನ್ನ ಹೊರಗೆ ಹಾಕಲಾಗಿತ್ತು. ಆದರೆ, ತಪ್ಪೊಪ್ಪಿಕೊಂಡು ಮನೆ ಸೇರಿಕೊಂಡು ತೊಂದರೆ ಕೊಡುತ್ತಿದ್ದಾರೆ ಎಂದು ಮಗ ನಿತಿನ್ ಹಾಗೂ ಸೊಸೆ ಸ್ಮಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ಈ ಕಿರುಕುಳದಿಂದ ಮುಕ್ತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಶ್ಯಾಮಲಾ ದೇವಿಯವರ ದೂರಿನ ಅನ್ವಯ, ಮಗ ನಿತಿನ್ ಹಾಗೂ ಸೊಸೆಯ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು