ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ ‘ಕಾಟೇರ’ ಸಿನಿಮಾ ಇದೀಗ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಬರೆಯಲು ಸಿದ್ಧವಾಗಿದೆ. ಈ ಚಿತ್ರ 100 ಕೋಟಿ ರೂಪಾಯಿ ಕಲೆಕ್ಷನ್ನತ್ತ ದಾಪುಗಾಲು ಇಡುತ್ತಿದ್ದು, ಹಲವು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
‘ಕಾಟೇರ’ ಚಿತ್ರ ಡಿಸೆಂಬರ್ 29ರಂದು 19.79 ಕೋಟಿ ರೂಪಾಯಿ ಕಲೆ ಹಾಕಿತು. ಆ ಬಳಿಕ ಡಿಸೆಂಬರ್ 30ರಂದು 17.35 ಕೋಟಿ ರೂಪಾಯಿ, ಡಿಸೆಂಬರ್ 31ರಂದು 20.94 ಕೋಟಿ ರೂಪಾಯಿ ಹಾಗೂ ಜನವರಿ 1ರಂದು 18.26 ಕೋಟಿ ರೂಪಾಯಿ ಬಾಚಿಕೊಂಡಿತು. ಈಗ ಜನವರಿ 2ರಂದು ಚಿತ್ರಕ್ಕೆ 9.24 ಕೋಟಿ ರೂಪಾಯಿ ಹರಿದುಬಂದಿದೆ. ಈ ಮೂಲಕ ಸಿನಿಮಾದ ಗಳಿಕೆ 86.84 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಲಭಿಸಿದೆ.
ಈ ಸಿನಿಮಾಕ್ಕೆ ತರುಣ್ ಸುಧೀರ್ ಅವರು ಆ್ಯಕ್ಷನ್ ಕಟ್ ಹೇಳಿದ್ದು, ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ದರ್ಶನ್ಗೆ ಜೊತೆಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸಿದ್ದಾರೆ.