News Karnataka Kannada
Tuesday, April 30 2024
ಸಾಂಡಲ್ ವುಡ್

‘ಕಾಟೇರ’ ಅಡ್ವಾನ್ಸ್ ಬುಕಿಂಗ್ ಆರಂಭ: ಟಿಕೆಟ್ ಬೆಲೆ ಎಷ್ಟು ಗೊತ್ತ?

Kateera
Photo Credit : News Kannada

ಬೆಂಗಳೂರು: ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ.  ‘ಕಾಟೇರ’ ಸಿನಿಮಾ ಬಿಡುಗಡೆಗೆ ಇನ್ನು ಕೇವಲ 6 ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಆಗಿದೆ. ಬೆಂಗಳೂರಿನಲ್ಲಿ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಬುಕಿಂಗ್ ಓಪನ್ ಮಾಡಲಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಫಾಸ್ಟ್ ಆಗಿ ಬುಕಿಂಗ್ ಆಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ಕ್ರೇಜ್ ಏನು ಕಮ್ಮಿ ಇಲ್ಲ. ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಡಿ ಬಾಸ್ ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 70ರ ದಶಕದ ಅವತಾರದಲ್ಲಿ ದರ್ಶನ್ ನೋಡುವುದಕ್ಕೆ ಸಜ್ಜಾಗಿದ್ದಾರೆ. ಸದ್ಯ ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್ ಬೆಲೆ ಬಗ್ಗೆನೇ ಚರ್ಚೆಯಾಗುತ್ತಿದೆ.

ಮೊದಲ ಹಂತವಾಗಿ ಬೆಂಗಳೂರಿನ ಸುಮಾರು 10 ಥಿಯೇಟರ್‌ಗಳಲ್ಲಿ ‘ಕಾಟೇರ’ ಸಿನಿಮಾದ ಅಡ್ವಾನ್ಸ್ ಬುಕಿಂಗ್‌ ಓಪನ್ ಮಾಡಲಾಗಿದೆ. 150 ರೂಪಾಯಿಂದ ಟಿಕೆಟ್ ಬೆಲೆ ಆರಂಭವಾಗಿ 500 ರೂಪಾಯಿವರೆಗೂ ಇದೆ. ಆದರೆ, ರಾಕ್‌ಲೈನ್ ಸಿನಿಮಾಸ್‌ನಲ್ಲಿ ಟಿಕೆಟ್ ಬೆಲೆ ಗಗನಕ್ಕೆ ಏರಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರದ್ದೇ ಸಿನಿಮಾ ಹಾಲ್ ಆಗಿರುವುದರಿಂದ ಇಲ್ಲಿ ಟಿಕೆಟ್ ಬೆಲೆ ದುಬಾರಿ ಎನಿಸಿದೆ.

ಮೊದಲ ಎರಡು ಶೋಗಳ ಟಿಕೆಟ್ ಬೆಲೆ 1000 ರೂಪಾಯಿ ಇಡಲಾಗಿದೆ. ಮಧ್ಯರಾತ್ರಿ 12 ಗಂಟೆ ಹಾಗೂ 3.30 ನಿಮಿಷಕ್ಕೆ ಆರಂಭ ಆಗುವ ಶೋ ನೋಡಬೇಕು ಅಂತಿದ್ದರೆ, 1000 ರೂಪಾಯಿ ಕೊಟ್ಟು ಟಿಕೆಟ್ ಖರೀದಿ ಮಾಡಬೇಕು. ಇದೂವರೆಗೂ ದರ್ಶನ್ ಸಿನಿಮಾದ ಟಿಕೆಟ್ ಬೆಲೆ ಇಷ್ಟೊಂದು ದುಬಾರಿ ಎನಿಸಿರಲಿಲ್ಲ.

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ರಾಕ್‌ಲೈನ್ ಸಿನಿಮಾಸ್‌ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ‘ಕಾಟೇರ’ ಸಿನಿಮಾ ಆರಂಭ ಆಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು