ಬೆಂಗಳೂರು: ರಾಮಾಚಾರಿ 2.0 ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ತೇಜ್ ರಾಮಾಚಾರಿ ಸಿನಿಮಾದಲ್ಲಿ ನಾಯಕ, ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಹಿರಿಯ ರಾಘವೇಂದ್ರ ರಾಜ್ಕುಮಾರ್, ಸ್ಪರ್ಶ ರೇಖಾ, ಚಂದನಾ, ಸ್ವಾತಿ, ವಿಜಯ ಚೆಂಡೂರು ಅಭಿನಯಿಸಿದ್ದಾರೆ.
“ರಾಮಾಚಾರಿ 2.0′ ಅಂತಿದ್ದರೂ, ಈ ಹಿಂದೆ ಬಂದ “ರಾಮಾಚಾರಿ ಹೆಸರಿನ ಸಿನಿಮಾಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ವಿಷಯ ಹೀಗೆ ಇರುವ ಕಾರಣ ರಾಮಚಾರಿ ಎಂಬ ಹೆಸರು ಇಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.