ಬೆಂಗಳೂರು: ಖ್ಯಾತ ನಿರ್ದೇಶಕ ಎಸ್ ನಾರಾಯಣ್ ನಿರ್ದೇಶಿಸಲಿರುವ ಹೊಸ ಧಾರಾವಾಹಿಯಲ್ಲಿ ನಟ ಅನಿರುದ್ಧ ನಟಿಸಲಿದ್ದಾರೆ.
ಸೀರಿಯಲ್ ಟೈಟಲ್ ಸೂರ್ಯವಂಶ. ಇದು ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಅನಿರುದ್ಧ ಇತ್ತೀಚೆಗೆ ನಿರ್ದೇಶಕರೊಂದಿಗಿನ ವಾಕ್ಸಮರದ ನಂತರ ಜೊತೆ ಜೊತೆಯಲಿ ಧಾರಾವಾಹಿಯನ್ನು ತೊರೆಯುವ ಮೂಲಕ ಸುದ್ದಿಯಲ್ಲಿದ್ದರು.
1999 ರಲ್ಲಿ, ಎಸ್. ನಾರಾಯಣ್ ಅವರು ಅದೇ ಶೀರ್ಷಿಕೆಯ ಚಲನಚಿತ್ರವನ್ನು ನಿರ್ದೇಶಿಸಿದ್ದರು, ಅದರಲ್ಲಿ ಅನಿರುದ್ಧ ಅವರ ಮಾವ ವಿಷ್ಣುವರ್ಧನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.