ಬೆಂಗಳೂರು: ಮತದಾನ ಮಹತ್ವ ಸಾರುವ ಸಿನಿಮಾ ಪ್ರಭುತ್ವ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚೇತನ್ ಚಂದ್ರ ಅಭಿನಯಿಸಿದ್ದು, ಮೇಘಡಹಳ್ಳಿ ಶಿವಕುಮಾರ್ ಕಥೆ ರಚಿಸಿದ್ದಾರೆ. ರಂಗನಾಥ್ ಅವರ ನಿರ್ದೇಶನವಿದೆ.
ಚೇತನ್ ಚಂದ್ರ ಅವರಿಗೆ ನಾಯಕಿಯಾಗಿ ಪಾವನ ಗೌಡ ಅಭಿನಯಿಸಿದ್ದಾರೆ. ಮತದಾರರು ಮತಗಳನ್ನು ಮಾರಿಕೊಳ್ಳಬಾರದು ಎಂಬ ಆಶಯವನ್ನು ಚಿತ್ರ ತಂಡ ಹೊಂದಿದ್ದು, ವಿಧಾನಸಭೆ ಚುನಾವಣೆಗೆ ಮೊದಲೇ ಚಿತ್ರ ಬಿಡುಗಡೆ ಮಾಡುವ ಇರಾದೆ ತಂಡಕ್ಕಿದೆ.