ಗೆಳೆಯರೊಂದಿಗೆ ವಿಷೇಶ ವಿಮಾನದಲ್ಲಿ ಮಲೇಷ್ಯಾಕ್ಕೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾದ ಚಿನ್ನದ ಅಂಗಡಿ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ನೀಡಿದ ಭಾರೀ ಉಡುಗೊರೆಯ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.
ಮಲೇಷ್ಯಾಗೆ ಬಂದಿಳಿದಿರುವ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿ ಮುಗಿಬಿದ್ದರು. ಚಿನ್ನದ ಅಂಗಡಿ ಉದ್ಘಾಟನೆಯ ನಂತರ ನಟ ಯಶ್ ಫ್ಯಾನ್ಸ್ ಭೇಟಿಯಾಗಿದ್ದಾರೆ. ಜೊತೆಗೆ ಚಿನ್ನದ ಅಂಗಡಿ ಉದ್ಘಾಟಿಸಿದ್ದಕ್ಕಾಗಿ ಅವರಿಗೆ ಕೆ.ಜಿ.ಎಫ್ ಶೈಲಿಯ ಚಿನ್ನದ ಬಿಸ್ಕತ್ ನೀಡಲಾಗಿದೆ. ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಯಶ್ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದ್ದಾರೆ. ಆ ವಿಡಿಯೋ ಕೂಡ ವೈರಲ್ ಆಗಿದೆ.