ಬೆಂಗಳೂರಿನ ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಮಾರ್ಚ್ 3) ಸಂಜೆ ಚಾಲನೆ ನೀಡಿದ್ದಾರೆ.
ಹಲವು ರಾಷ್ಟ್ರಗಳಲ್ಲಿ ಹಲವು ರೀತಿಯ ಸಿನಿಮಾಗಳು ತಯಾರಾಗುತ್ತವೆ. ಪ್ರತಿ ದೇಶದ ಸಿನಿಮಾಗಳು ಅಲ್ಲಿಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಈ ರೀತಿ 55 ದೇಶಗಳ ಸಿನಿಮಾಗಳನ್ನು ಒಂದೇ ಕಡೆ ನೋಡುವ ಅವಕಾಶ ಈ ಬಾರಿಯ ಬೆಂಗಳೂರು ಚಲನಚಿತ್ರೋತ್ಸದಲ್ಲಿ ಆಗುತ್ತಿದೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ , ರಾಜೀವ್ ಚಂದ್ರಶೇಖರ್ ಅವರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅತಿಥಿಯಾಗಿ ಭಾರತಿ ವಿಷ್ಣುವರ್ಧನ್ ಭಾಗಿಯಾಗಿದ್ದಾರೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮೊದಲಾದವರು ಪಾಲ್ಗೊಂಡಿದ್ದಾರೆ.
ಈ ಬಾರಿ 55 ರಾಷ್ಟ್ರಗಳ 200ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನವಾಗಲಿದೆ. ಮಾರ್ಚ್ 10ರವರೆಗೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಲಿದೆ. ಸಂಜೆ 7:45ಕ್ಕೆ ಉದ್ಘಾಟನಾ ಚಿತ್ರವಾಗಿ ಗ್ರೀಸ್ನ ‘ಟೈಲರ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸೋನಿಯಾ ಲಿಸಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.