News Karnataka Kannada
Monday, April 29 2024
ಸಾಂಡಲ್ ವುಡ್

100  ಸಿನಿಮಾದಲ್ಲಡಗಿದೆ ಭಯಾನಕ ಥ್ರಿಲ್ಲಿಂಗ್ ಕಹಾನಿ..!

New Project 2021 11 08t162558.252
Photo Credit :

https://youtu.be/nP2SaA3fhfg

ಸ್ಯಾಂಡಲ್ ವುಡ್:   ಬರೀ ಲವ್ವರ್ ಬಾಯ್ ಆಗಿನೇ ನಮ್ಗೆ ನಿಮ್ಗೆ ಪರಿಚಿತರಿದ್ದ ನಟ ರಮೇಶ್ ಅರವಿಂದ್.  ಆದ್ರೆ ಅವ್ರು ಖಡಕ್ ಆಫೀಸರ್ ಆಗಿನೂ ಸಿಕ್ಕಾಪಟ್ಟೆ ಇಷ್ಟವಾಗಿ ಬಿಟ್ಟಿದ್ದಾರೆ. 100 ಸಿನಿಮಾದಲ್ಲಿನ ಅವರ ಲುಕ್ ಗೆ ಮಂದಿ ಫಿದಾ ಆಗಿದ್ದಾರೆ.  ಯಾಕಂದ್ರೆ ಯಾವುದೇ ಪಾತ್ರವಾಗಲೀ, ಎಂಥದ್ದೇ ಲುಕ್ ಆಗಲಿ ಅದೆಲ್ಲದಕ್ಕೂ ರಮೇಶ್ ಅರವಿಂದ್ ಮ್ಯಾಚ್ ಆಗ್ತಾರೆ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡ್ತಾರೆ. ಅದು 100 ಸಿನಿಮಾದಲ್ಲಿ ಪಕ್ಕಾ ತಿಳೀತಾ ಇದೆ.

100 ಸಿನಿಮಾ ಇದೇ ತಿಂಗಳು 19ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ಟ್ರೇಲರ್ ರಿಲೀಸ್ ಮಾಡಿದೆ. ನಮ್ಮ ನಿಮ್ಮ ನಡುವೆ ಬಿಡಿಸಲಾರದ ಬಂಧವಾಗಿ ಅಂಟಿಕೊಂಡಿರುವ ವಸ್ತುವನ್ನೇ 100 ಸಿನಿಮಾದಲ್ಲಿ ಹೈಲೈಟ್ ಮಾಡಲಾಗಿದೆ. ಅದು ಬೇರೆ ಯಾವ್ದು ಅಲ್ಲ ಮೊಬೈಲ್ ಅಂಡ್ ಸೋಷಿಯಲ್ ಮೀಡಿಯಾ.

ನೋಡ ನೋಡುತ್ತಲೇ ಮನುಷ್ಯ ಮೊಬೈಲ್ ಗೆ ಅದೆಷ್ಟು ಅಡಿಕ್ಟ್ ಆಗೋಗಿದ್ದಾನೆ ಅನ್ನೋದು ನಿಮ್ಮ ಅನುಭವಕ್ಕೂ ಬಂದೇ ಇರುತ್ತೆ.  ಮನುಷ್ಯನಿಗೆ ಪಾಸಿಟಿವ್ ವೈಬ್ ಗಿಂತ ನೆಗೆಟಿವ್ ವೈಬ್ ಕಡೆಗೆ ಗಮನ ಹೆಚ್ಚು ಸೆಳೆಯೋದು. ಹಾಗಂತ‌ ಮೊಬೈಲ್ ಬಳಕೆ ಕಂಪ್ಲೀಟ್ ರಾಂಗ್ ಅನ್ನೋ ಉದ್ದೇಶ ಅಲ್ಲ. ಆದ್ರೆ ಅದರ ಬಳಕೆ ಇತ್ತೀಚಿನ‌ ದಿನಗಳಲ್ಲಿ ಬೇಡದ ವಿಚಾರಕ್ಕೇ‌ನೆ ಬಳಕೆಯಾಗ್ತಾ ಇದೆ.

100 ಸಿನಿಮಾದಲ್ಲಿ ಅದನ್ನ ಒತ್ತಿ ಹೇಳೋದಕ್ಕೆ ಪ್ರಯತ್ನಿಸಲಾಗ್ತಿದೆ. ಮೊಬೈಲ್ ಮೊಬೈಲ್ ಮೊಬೈಲ್.. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾ ಕೂಡ ಅದರೆರಡು ಪಟ್ಟು ಮನುಷ್ಯನ ಜೀವನವನ್ನ ಆವರಿಸಿಕೊಂಡು‌ ಬಿಟ್ಟಿದೆ. ರಮೇಶ್ ಅರವಿಂದ್ ನಟಿಸಿ,‌ ನಿರ್ದೇಶಿಸಿರುವ 100ನಲ್ಲೂ ಅದೇ ಅಡಗಿದೆ.

ಫ್ಯಾಮಿಲಿ ಕಾಪಾಡಿಕೊಳ್ಳೋ ಜವಾಬ್ದಾರಿಯುತ ವ್ಯಕ್ತಿಯಾಗಿ, ಸಮಾಜ ಕಾಪಾಡೋ ಖಡಕ್ ಅಧಿಕಾರಿಯಾಗಿ ಎರಡು ಶೇಡ್ ನಲ್ಲಿ ರಮೇಶ್ ಅರವಿಂದ್ ಗಮನ ಸೆಳೆಯುತ್ತಿದ್ದಾರೆ. ವಿಷ್ಣು ಪಾತ್ರದಲ್ಲಿರುವ ರಮೇಶ್ ಅರವಿಂದ್ ಮನೆಯಲ್ಲಿ ಮಕ್ಕಳು ಮೊಬೈಲ್ ಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಅನ್ನೋದನ್ನು ಗಮನಿಸ್ತಾ ಇರ್ತಾರೆ. ಅದರಿಂದಾಗುವ ಸೈಬರ್ ಸಮಸ್ಯೆ ರಮೇಶ್ ಅರವಿಂದ್ ಗೆ ಗೊತ್ತಿರೋ ಕಾರಣ ಮಕ್ಕಳಿಗೆ ಗದರಿಯೂ ಬುದ್ಧಿ ಹೇಳಲು ಪ್ರಯತ್ನಿಸುತ್ತಾರೆ. ಆದ್ರೆ ಪ್ರಯೋಜನವಾಗಲ್ಲ. ಸೋಶಿಯಲ್ ಮೀಡಿಯಾ ಬೇಡ ಅಂದ್ರೆ ನೀವೂ ಓಲ್ಡ್ ಮಾಡೆಲ್ ಅನ್ನೊ ಪಟ್ಟ. ಹೀಗಾಗಿ ಎಲ್ಲವನ್ನು ನಿಭಾಯಿಸಿಕೊಂಡು ಸಂಸಾರ, ಸಮಾಜ ಎರಡನ್ನು ಏಕಕಾಲದಲ್ಲೆ ನಿಭಾಯಿಸಬೇಕಾದ ಚಾಲೆಂಜ್ ರಮೇಶ್ ಅರವಿಂದ್ ಗೆ ಸಿನಿಮಾದಲ್ಲಿ ಎದುರಾಗಿದೆ. ಇದೆ ಟ್ರೇಲರ್ ನಲ್ಲೂ ಸ್ಪಷ್ಟವಾಗಿ ಕಾಣ್ತಿದೆ.

100 ಸೈಬರ್‌ ಕ್ರೈಮ್‌ ಆಧಾರಿತ ಸಿನಿಮಾವಾಗಿದ್ದು, ರಮೇಶ್ ಅರವಿಂದ್ ಜೊತೆಗೆ ರಚಿತಾ ರಾಮ್ ಹಾಗೂ ಪೂರ್ಣ ಜೊತೆಯಾಗಿದ್ದಾರೆ. ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು,  ಶ್ರೀಮತಿ ಉಮಾ, ಶ್ರೀ ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  ರವಿ ಬಸ್ರೂರು ಸಂಗೀತ, ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ,  ಧನಂಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ ಈ ಚಿತ್ರಕ್ಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು