News Karnataka Kannada
Tuesday, April 30 2024
ಆಂಧ್ರಪ್ರದೇಶ

ಆಂಧ್ರ ಸರ್ಕಾರದಿಂದ ₹130 ಕೋಟಿ ಬಾಕಿ

New Project 2021 11 08t134839.169
Photo Credit :

ಅಮರಾವತಿ: ತ್ವರಿತಗತಿಯಲ್ಲಿ ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಆಂಧ್ರಪ್ರದೇಶದ ಅಂಗನವಾಡಿಗಳಿಗೆ ನಿಗದಿಯಂತೆ ಹಾಲು ಪೂರೈಸಲಾಗದು ಎಂದು ಕರ್ನಾಟಕ ಹಾಲು ಒಕ್ಕೂಟವು (ಕೆಎಂಎಫ್‌) ತಿಳಿಸಿದೆ.ಸದ್ಯ ಆಂಧ್ರ ಸರ್ಕಾರವು ₹ 130 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.ಹಾಲಿನ ದರವನ್ನು ಪರಿಷ್ಕರಿಸಿ ಲೀಟರಿಗೆ ₹ 5 ಏರಿದ್ದು, ಇದಕ್ಕೆ ಸಮ್ಮತಿ ನೀಡಬೇಕಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಹಾಲು ಪೂರೈಕೆ ಸಂಬಂಧ ಒಕ್ಕೂಟ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವೆ 2020ರ ಜೂನ್‌ ತಿಂಗಳಲ್ಲಿ ಒಪ್ಪಂದವಾಗಿತ್ತು. ಇದರ ಪ್ರಕಾರ, ವಾಸ್ತವ ದರಕ್ಕಿಂತ ಕಡಿಮೆ, ಅಂದರೆ ಲೀಟರ್‌ಗೆ ₹ 5ರಂತೆ ಪೂರೈಸುತ್ತಿತ್ತು. ಖರೀದಿ ದರ, ಇಂಧನ ದರ ಏರಿಕೆಯಿಂದಾಗಿ ಇದೇ ವರ್ಷದ ಫೆಬ್ರುವರಿಯಲ್ಲಿ ಲೀಟರ್‌ಗೆ ₹ 5 ಏರಿಸಲಾಗಿತ್ತು

ಒಕ್ಕೂಟವು ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಿದಲ್ಲಿ ಅಲ್ಲಿನ ಅಂಗನವಾಡಿಗಲ್ಲಿರುವ ಸುಮಾರು 20 ಲಕ್ಷ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಆಂಧ್ರ ಸರ್ಕಾರದ ‘ಸಂಪೂರ್ಣ ಪೋಷಣಾ ಯೋಜನೆ’ಯಡಿ ಅಂಗನವಾಡಿಗಳ ಎಲ್ಲ ಮಕ್ಕಳಿಗೆ ಅಲ್ಲಿನ ಸರ್ಕಾರ ಹಾಲು ಪೂರೈಸಲು ಒತ್ತು ನೀಡಿದೆ.

ಆಧ್ರಪ್ರದೇಶ ಸರ್ಕಾರವು ಈ ಉದ್ದೇಶಕ್ಕಾಗಿ ಮಾಸಿಕ, ಒಕ್ಕೂಟದಿಂದ ‘ನಂದಿನಿ’ ಬ್ರಾಂಡ್‌ನ 110 ಲಕ್ಷ ಲೀಟರ್ ಹಾಲು ಖರೀದಿಸುತ್ತಿದೆ. ಆದರೆ, ನಾಲ್ಕು ತಿಂಗಳಿಂದ ಹಣ ಪಾವತಿಯಾಗಿಲ್ಲ. ಬಾಕಿ ₹ 130 ಕೋಟಿ ಆಗಿದೆ.

ದರ ಏರಿಕೆ ಕುರಿತು ಸಂಬಂಧಿತ ಅಧಿಕಾರಿಗಳು ಮೌಖಿಕ ಭರವಸೆ ನೀಡಿದ್ದರು. ಯೋಜನೆಯ ಉದ್ದೇಶದ ಕಾರಣಕ್ಕಾಗಿ ನಾವು ಹಾಲು ಪೂರೈಸುತ್ತಿದ್ದೆವು. ಬಾಕಿ ಪಾವತಿ ಕುರಿತು ಹಲವು ಬಾರಿ ಸಭೆ ನಡೆದಿದ್ದು, ಪತ್ರ ಬರೆದರೂ ಹಣ ನೀಡಿಲ್ಲ. ದರವನ್ನು ಲಿಖಿತವಾಗಿ ಪರಿಷ್ಕರಿಸಿಲ್ಲ ಎಂದಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಈ ಸಂಬಂಧ ಆಂಧ್ರದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

ಖರೀದಿ ದರ, ಸಂಸ್ಕರಣೆ ವೆಚ್ಚದ ಏರಿಕೆ, ಇಂಧನ ದರ ಏರಿಕೆಯ ಕಾರಣಗಳಿಂದಾಗಿ ಈಗ ಒಕ್ಕೂಟಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಹೀಗಾಗಿ, ಹಾಲಿ ನಿಗದಿತ ದರದಲ್ಲಿ ಹಾಲು ಪೂರೈಸಲಾಗದು. ಆಂಧ್ರ ಸರ್ಕಾರದಿಂದ ಹಣ ಪಾವತಿ ನಿಯಮಿತವಾಗಿಲ್ಲ ಹಾಗೂ ವಿಳಂಬವಾಗುತ್ತಿದೆ ಎಂದೂ ಸತೀಶ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು