ಸಾಂಡಲ್ ವುಡ್ : ನಟಿ ಕಂ ನಿರೂಪಕಿ ಶೀತಲ್ ಶೆಟ್ಟಿ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ ವಿಂಡೋಸೀಟ್. ಆರಂಭದಿಂದಲೂ ಕ್ಯೂರಿಯಾಸಿಟಿ
ಹೂಬಳ್ಳಿಯಂತಿರುವ ವಿಂಡೋಸೀಟ್ ಸಿನಿಮಾದ ವಿಭಿನ್ನ ಶೈಲಿಯ ಹಾಡೊಂದು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಅರ್ಜುನ್ ಜನ್ಯ ಮ್ಯೂಸಿಕ್… ಸೌಂದರ್ಯ ಜಯಚಂದ್ರನ್ ವಾಯ್ಸ್. ಮಹೇಶ್ ರಘುನಂದನ್ ಲಿರಿಕ್ಸ್ ನ ಸರೆಂಡರ್ ಹಾಡು ಕೇಳುಗರಿಗೆ ಕಿಕ್ ಕೊಡ್ತಿದೆ.
ಜಾಝ್ ಶೈಲಿಯಲ್ಲಿ ಮೂಡಿ ಬಂದಿರುವ ಹಾಡಲ್ಲಿ ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗರ್ ಸಖತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಸರೆಂಡರ್ ಹಾಡು ಕನ್ನಡದ ಮಟ್ಟಿಗೆ ವಿಶೇಷವಾಗಿ ಮೂಡಿ ಬಂದಿದ್ದು ಎಲ್ಲರನ್ನು ಅಟ್ರ್ಯಾಕ್ಟ್ ಮಾಡುತ್ತಿದೆ.
ಈ ಹಿಂದೆ ರಿಲೀಸ್ ಬಂದಿದ್ದ ಟೀಸರ್ ಕೂಡ ತುಂಬಾ ಅದ್ಭುತವಾಗಿ ಮೂಡಿ ಬಂದಿತ್ತು. ರೋಮ್ಯಾಂಟಿಕ್ ಥ್ರಿಲ್ಲರ್ ಸಬ್ಜೆಕ್ಟ್ ಹೂರಣದ ವಿಂಡೋಸೀಟ್ ಸಿನಿಮಾದಲ್ಲಿ ರಂಗಿತರಂಗ ರಾಜಕುಮಾರ ನಿರೂಪ್ ಭಂಡಾರಿ ಹೀರೋ ಆಗಿ ಮಿಂಚಿದ್ದು, ಅಮೃತಾ ಹಾಗೂ ಸಂಜನಾ ನಿರೂಪ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ವಿಂಡೋಸೀಟ್ ಬಳಗ ಪ್ರಮೋಷನ್ ಮಾಡಲು ಸಕಲ ರೀತಿಯಿಂದ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ವಿಂಡೋಸೀಟ್ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಬೇಕಿತ್ತು. ಆದ್ರೆ ಕೊರೊನಾ ಇದೆಲ್ಲದಕ್ಕೂ ಬ್ರೇಕ್ ಹಾಕಿದೆ. ಆದ್ರೇನಾಯ್ತು ಲೇಟ್ ಆದ್ರೂ ಲೆಟೆಸ್ಟ್ ಆಗಿ ತೆರೆಗೆರ್ತಿದ್ದು, ಚಿತ್ರಪ್ರೇಮಿಗಳಿಗೆ ಸದ್ಯದಲ್ಲಿಯೇ ಗುಡ್ ನ್ಯೂಸ್ ನೀಡಲಿದೆ.
ಕೆ ಎಸ್ ಕೆ ಶೋ ರೀಲ್ ಬ್ಯಾನರ್ ನಡಿ ತಯಾರಾಗಿರುವ ವಿಂಡೋಸೀಟ್ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್, ವಿಘ್ನೇಶ್ ರಾಜ್ ಕ್ಯಾಮೆರಾ ಕೈಚಳಕ, ರಿತ್ವಿಕ್ ಸಂಕಲನ ಸಿನಿಮಾಕ್ಕಿದೆ. ಉಳಿದಂತೆ ರವಿಶಂಕರ್, ಲೇಖಾ ನಾಯ್ಡು, ಮಧುಸೂದನ್ ರಾವ್, ಸೂರಜ್ ಒಳಗೊಂಡಂತೆ ಹಲವು ತಾರಾ ಬಳಗ ಸಿನಿಮಾದಲ್ಲಿದೆ.