ಕಾಮಿಡಿ ಸ್ಟಾರ್ ನಟ ಶರಣ್ ಹಾಗೂ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಅವತಾರ ಪುರುಷ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ.
ಮೇ 2021ರಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಇದೀಗ ಡಿ.10ರಂದು ತೆರೆ ಮೇಲೆ ಬರಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ಆಶಿಕಾ ರಂಗನಾಥ್ ಮಿಂಚಲಿದ್ದಾರೆ.
‘ಲಡ್ಡೂ ಬಂದು ಬಾಯಿಗೆ ಬಿತ್ತಾ’ ಸಿನಿಮಾದ ಎರಡನೇ ಹಾಡಾಗಿದ್ದು, ಪುಷ್ಕರ್ ಫಿಲ್ಮ್ಸ್ ನ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಇದನ್ನು ನಿಹಾಲ್ ಟೌರೊ ಹಾಡಿದ್ದು, ಸಿಂಪಲ್ ಸುನಿ ಸಾಹಿತ್ಯ ಕೊಟ್ಟಿದ್ದಾರೆ. ಇದಕ್ಕೆ ಅರ್ಹುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.
‘ಅವತಾರ ಪುರುಷ’ ಚಿತ್ರದ ಟೀಸರ್ ಹಾಗೂ ಟ್ರೇಲರ್ನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಚಿತ್ರ ಇದಾಗಿದೆ. ಈ ಚಿತ್ರ 2 ಭಾಗಗಳಲ್ಲಿ ತೆರೆಗೆ ಬರಲಿದೆ.