News Karnataka Kannada
Wednesday, May 08 2024
ಸಾಂಡಲ್ ವುಡ್

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್-2 ಹೊಸ ಫೋಸ್ಟರ್ ಬಿಡುಗಡೆ

Shivaji Surathkal 2
Photo Credit : Twitter

ಬೆಂಗಳೂರು: ನಟ ರಮೇಶ್ ಅರವಿಂದ್ ನಟನೆಯ’ ಶಿವಾಜಿ ಸುರತ್ಕಲ್’ ಚಿತ್ರದ ಎರಡನೇ ಭಾಗದ ಹೊಸ ಫೋಸ್ಟರ್ ಬಿಡುಗಡೆಯಾಗಿದೆ. 21 ದಿನಗಳ ಚಿತ್ರೀಕರಣದ ನಂತರ ಮಹಾಶಿವರಾತ್ರಿ ದಿನವಾದ ಇಂದು ಸಿನಿಮಾದ ಎರಡನೇ ಪೋಸ್ಟರ್ ನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.

ಕಳೆದ ಎರಡು ವರ್ಷಗಳ ಹಿಂದೆ 2020ರಲ್ಲಿ ಶಿವಾಜಿ ಸುರತ್ಕಲ್ ಸಿನಿಮಾದ ಮೊದಲ ಭಾಗ ಮಹಾಶಿವರಾತ್ರಿಯಂದೇ ತೆರೆ ಕಂಡಿತ್ತು.

ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ ಎರಡನೇ ಭಾಗದಲ್ಲೂ ರಮೇಶ್ ಅರವಿಂದ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಾಜಿಯ ವೈಯಕ್ತಿಕ ಜೀವನವನ್ನು ಸಹ ಹೇಳಲಾಗುತ್ತಿದೆ. ಈ ಬಾರಿ ‘ದಿ ಮಿಸ್ಟೀರಿಸ್ ಕೇಸ್ ಆಫ್ ಮಾಯಾವಿ’ ಭೇದಿಸಲು ಸಜ್ಜಾಗಿದ್ದಾರೆ. ನಾಸೀರ್ ಶಿವಾಜಿ ತಂದೆ ವಿಜಯೇಂದ್ರ ಸುರತ್ಕಲ್ ಪಾತ್ರವನ್ನು ನಿಭಾಯಿಸುತ್ತಿದ್ದು, ರಮೇಶ್ ಅರವಿಂದ್ ಅವರೊಂದಿಗೆ ಪ್ರಥಮ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಆಕಾಶ್ ತಿಳಿಸಿದ್ದಾರೆ.

ಶಿವಾಜಿ ಮಗಳಾದ ಸಿರಿ ಸುರತ್ಕಲ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ತನ್ನ ಮುದ್ದಿನ ಮಗಳನ್ನು ಚುಕ್ಕಿ ಎಂದು ಶಿವಾಜಿ ಕರೆಯುತ್ತಾರೆ. ಅಲ್ಲಿ ಶಿವಾಜಿಗೆ ಸಿಕ್ಕಿದ್ದೆಲ್ಲಿ ಎಂಬ ಪ್ರಶ್ನೆಗೂ ಈ ಚಿತ್ರದಲ್ಲಿ ಉತ್ತರ ಸಿಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸುರತ್ಕಲ್, ಮಲ್ಫೆ ಬೀಚ್, ಕಾಪು ಬೀಚ್, ಮರವಂತೆ, ಮುರ್ಡೇಶ್ವರ ಮತ್ತಿತರ ಕಡೆಗಳಲ್ಲಿ ಈಗಾಗಲೇ ಚಿತ್ರೀಕರಣ ಪೂರೈಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು