News Karnataka Kannada
Thursday, May 02 2024
ಸಾಂಡಲ್ ವುಡ್

ಹಾಸ್ಯ ನಟನ ಮೇಲೆ ಗಂಭೀರ ಆರೋಪ

New Project 2021 09 15t155418.537
Photo Credit :
ವಿಜಯಪುರ : ಸ್ಯಾಂಡಲ್ ವುಡ್ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ತಮ್ಮ ಸೋದರ ಅಳಿಯನ ಪತ್ನಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ಸನಾ ಕರಜಗಿ ಮೇಲೆ ತಾಳಿಕೋಟೆ ಹಲ್ಲೆ, ಬಲವಂತವಾಗಿ ವಿಷ ಕುಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ, ಅಕ್ಕನ ಪುತ್ರ ಫಯಾಜ್ ಕರಜಗಿ ಪರವಾಗಿ ನಿಂತು ರಾಜು ಅವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸನಾ ಕರಜಗಿ ಅವರ ತಾಯಿ ಫಾತಿಮಾ ಶಿರಹಟ್ಟಿ ವಿಜಯಪುರ ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದಾರೆ. ರಾಜು ತಾಳಿಕೋಟೆ, ಪತ್ನಿ ಪ್ರೇಮಾ ತಾಳಿಕೋಟೆ, ಫಯಾಜ್ ಕರಜಗಿ, ಸನಾ ಭಾವ ಪಿಂಟು ಸೇರಿ ಆರು ಜನರ ವಿರುದ್ಧ ದೂರು ದಾಖಲಾಗಿದೆ. ತಮ್ಮ ಮೇಲೆ ಸನಾ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ರಾಜು ತಾಳಿಕೋಟೆ ಪ್ರತಿ ಆರೋಪ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜು ತಾಳಿಕೋಟೆ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಸನಾ ಸಂಬಂಧಿಕರು ತಮ್ಮ ಮೇಲೆ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಜು ತಾಳಿಕೋಟೆ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ, ಸನಾ ಕರಜಗಿ ಸಂಬಂಧಿಕ ಎಸ್.ಕೆ ಮೋದಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. ಸದ್ಯ ಸನಾ ಕರಜಗಿ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು