News Karnataka Kannada
Sunday, May 05 2024
ಸಾಂಡಲ್ ವುಡ್

ಯೋಗಿ ಲಂಕೆ ಚಿತ್ರಕ್ಕೆ 175 ದಿನ ಯಶಸ್ವಿ ಪ್ರದರ್ಶನ ಕಂಡ ಸಂಭ್ರಮ

Lanke
Photo Credit : News Kannada

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗ್ತಾ ಇರುತ್ತೆ. ಒಂದಲ್ಲ ಎರಡಲ್ಲ ವಾರಕ್ಕೆ ಒಂಭತ್ತರಿಂದ ಹತ್ತು ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವೇಳೆ ಪ್ರೇಕ್ಷಕರ ಮನಸ್ಸಲ್ಲಿ ಉಳಿದುಕೊಳ್ಳುವ ಸಿನಿಮಾಗಳು ಕಡಿಮೆ. ಪ್ರೇಕ್ಷಕರು ಇಷ್ಟಪಟ್ಟು, ಥಿಯೇಟರ್ ನಲ್ಲಿ 50 ದಿನ ಉಳಿಯೋದೆ ಹೆಚ್ಚು. ಇಂಥ ಸಮಯದಲ್ಲಿ ನೂರು ದಿನ ಒಂದು ಸಿನಿಮಾ ಓಡುತ್ತೆ ಅಂದ್ರೆ ಅದು ದಾಖಲೆಯೇ ಸರಿ. ಆದ್ರೆ ಲೂಸ್ ಮಾದ ಯೋಗಿಯ ಲಂಕೆ ಸಿನಿಮಾ ಆ ದಾಖಲೆಯನ್ನು ಮುರಿದಿದೆ ಅಂದ್ರೆ ನಂಬ್ತೀರಾ..?

ನಂಬಲೇಬೇಕಾಗಿದೆ. ಲಂಕೆ ಸಿನಿಮಾ ಬರೋಬ್ಬರಿ 175 ದಿನ ಯಶಸ್ವಿಯಾಗಿ ರನ್ ಆಗಿದೆ. ಇಡೀ ಚಿತ್ರತಂಡಕ್ಕೆ ಇದಕ್ಕಿಂತ ಖುಷಿ ಬೇರೆ ಏನಿದೆ ಹೇಳಿ. ಅದರಲ್ಲೂ ನಿರ್ದೇಶಕ ರಾಮ್ ಪ್ರಸಾದ್ ಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಹೀಗಾಗಿ ಇದು ಮತ್ತಷ್ಟು ಖುಷಿ ಕೊಟ್ಟಂತ ವಿಚಾರವಾಗಿದೆ‌.

ಕೋವಿಡ್ ಸಂಕಷ್ಟದ ಕಾಲದಲ್ಲಿ ಚಿತ್ರರಂಗ ಎಷ್ಟೆಲ್ಲಾ ಸಮಸ್ಯೆಯನ್ನ ಎದುರಿಸಿದೆ ಅನ್ನೋದನ್ನ ಮತ್ತೆ ಹೇಳಬೇಕಿಲ್ಲ. ಚಿತ್ರಮಂದಿರಗಳಿಗೆ 50% ಅನುಮತಿ ಕೊಟ್ಟಾಗ ಸಿನಿಮಾ ರಿಲೀಸ್ ಮಾಡೋದಕ್ಕೆ ನಿರ್ಮಾಪಕರು ಕೂಡ ಧೈರ್ಯ ಮಾಡಿರಲಿಲ್ಲ. ಆದರೆ ಅಂಥ ಸಮಯದಲ್ಲಿ ಧಯತರ್ಯ ಮಾಡಿ ರಿಲೀಸ್ ಮಾಡಿದ್ದೆ ಲಂಕೆ. ಆದ್ರೆ ಇಂದು ಶತದಿನ ಕಂಡ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ ಈ ಲಂಕೆ ಸಿನಿಮಾ.

ಇನ್ನು ಲಂಕೆ ಸಿನಿಮಾ 175 ದಿನ ದಾಟಿದ ಖುಷಿಯನ್ನ ಸಂಭ್ರಮಿಸಲು ಚಿತ್ರತಂಡ ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ಕಲಾವಿದರಿಗೆ, ತಂತ್ರಜ್ಞರಿಗೆ ಮೊಮೆಂಟೋಗಳನ್ನ ನೀಡಲಿದ್ದಾರೆ. ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ ನಾಯಕಿಯರಾಗಿ ನಟಿಸಿದ್ದು, ಸಂಚಾರಿ ವಿಜಯ್, ಶರತ್ ಲೋಹಿತಾಶ್ವ, ಶೋಭರಾಜ್, ಸುಚೇಂದ್ರ ಪ್ರಸಾದ್, ಡ್ಯಾನಿ ಕುಟ್ಟಪ್ಪ ಒಳಗೊಂಡಂತೆ ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿದೆ. ಕಾರ್ತಿಕ್ ಶರ್ಮಾ ಸಂಗೀತದಲ್ಲಿ ಹಾಡುಗಳು ಗಮನ ಸೆಳೆದಿದ್ದು, ರಮೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು