News Karnataka Kannada
Monday, May 06 2024
ಸಾಂಡಲ್ ವುಡ್

ಮೇ ನಲ್ಲಿ ತೆರೆಗೆ ಬರಲಿದೆ ʼವ್ಯೋಮಕಾಯ ಸಿದ್ಧ ಅಲ್ಲಮ್ಮಪ್ರಭುʼ ಚಿತ್ರ

Inauguration of administrative office of Federation of Bunts Associations at Mulki on April 5
Photo Credit :

ಹುಬ್ಬಳ್ಳಿ: ಶ್ರಕ್ರ ಫಿಲಮ್ಸ್ ರವರ ‘ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮ್ಮಪ್ರಭು’ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಗೊಳ್ಳಲ್ಲಿದೆ. 12 ನೇ ಶತಮಾನದಲ್ಲಿ ಅಲ್ಲಮ್ಮಪ್ರಭುದೇವರ ಜೀವನ ಸಾಧನೆಯನ್ನು ಸಿನಿಮಾದ ಮೂಲಕ ತೊರಿಸಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಮಾಧವಾನಂದ ಶೇಗುಣಸಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಗಾದಿ ದಿನದಂದು ಚಿತ್ರದ ಎರಡು ಹಾಡುಗಳು ಬಿಡುಗಡೆ ಮಾಡಲಾಗಿದೆ. ರಾಮನವಮಿ ದಿನದಂದು 2 ಹಾಡುಗಳನ್ನು ಬಿಡುಗಡೆ ಮಾಡಲಿದ್ದೇವೆ. ಅಕ್ಕಮಹಾದೇವಿಯ ಜಯಂತಿಯೆಂದು ಎರಡು ಹಾಡುಗಳು ಬಿಡುಗಡೆಯಾಗಲಿವೆ ಎಂದರು.

ಈಗಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಚಿತ್ರಬಿಡುಗಡೆಗೆ ಸೆನ್ಸಾರ್ ಮಂಡಳಿಯ ಅನುಮತಿ ದೊರೆತಿದೆ. ಸಿನಿಮಾದಲ್ಲಿ ಅಲ್ಲಮ ಪ್ರಭುಗಳ ಬಾಲ್ಯದಿಂದ ಹಿಡಿದು ಜೀವಿತದ ಕೊನೆಯವರೆಗೆ ತೋರಿಸಲಾಗಿದೆ. ಬೆಂಗಳೂರು, ಬನವಾಸಿ, ತೆರದಾಳ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು.

ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ನಿರ್ಮಾಪಕ ಮಹಾವೀರ ಪ್ರಭು, ನಿರ್ದೇಶಕ ಶರಣ್ ಗದ್ವಾಲ್, ಸಿನಿಮಾ ನಾಯಕ ಸಚಿನ ಸುವರ್ಣ ಈ ವೇಳೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು