News Karnataka Kannada
Monday, April 29 2024
ಸಾಂಡಲ್ ವುಡ್

ಬಾಳ ದಾರಿಯಲ್ಲಿ ಸೂರ್ಯ ಜಾರಿ ಹೋದ… ರಾಜ್ ಕುಮಾರ

Punith
Photo Credit :

ಸ್ಯಾಂಡಲ್ ವುಡ್: ವರನಟ ಡಾ. ರಾಜ್ ಕುಮಾರ್ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಇಡೀ ಚಿತ್ರ ರಂಗಕ್ಕೆ ಭರಿಸಲಾಗದ ನೋವು ನೀಡಿದೆ. ಎರಡು ದಿನಗಳ ಹಿಂದೆಯಷ್ಟೇ ಅಣ್ಣ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನಿಮಾದ ಪ್ರಿ ರಿಲೀಸ್ ಸಂದರ್ಭದಲ್ಲಿ ನಗು ಮುಖದಲ್ಲಿ ನಟ ಯಶ್ ಜೊತೆ ವೇದಿಗೆ ಹಂಚಿಕೊಂಡ ಕ್ಷಣ ಅಭಿಮಾನಿಗಳ ಮನಸ್ಸಿನಿಂದ ‌ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ನಿಜಕ್ಕೂ ಆಘಾತಕಾರಿ ವಿಚಾರ‌.

ರಾಜ್ ಕುಮಾರ್ ಪುತ್ರರಲ್ಲಿ ಬಾಲ ನಟನಾಗಿ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಪುನೀತ್ ತಂದೆಯೊಂದಿಗೆ ಹಲವಾರು ಚಿತ್ರದಲ್ಲಿ ನಟಿಸಿ ಕೋಟಿ ಮನಸ್ಸುಗಳನ್ನು ಗೆದ್ದಿದ್ದಾರೆ.
ತಮ್ಮ ಜನ್ಮ ನಾಮ ಲೋಹಿತ್ ಕುಮಾರ್ ಇವರು ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ‌ಹೆಸರನ್ನು ಪುನೀತ್ ಎಂದು ಬದಲಾಯಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಪವರ್ ಸ್ಟಾರ್ ನಿಧನಕ್ಕೆ ಸಂತಾಪ ಸೂಚಿಸಿರುವುದು ಇವರ ನಟನೆ ಹಾಗೂ ಸರಳತೆಗೆ ದೊರೆತ ಗೌರವ.

ನಟ ಪುನೀತ್ ಕನ್ನಡ ಚಿತ್ರಗಳಲ್ಲಷ್ಟೇ ನಟನೆ ಮಾಡಿದ್ದರು, ಇವರ ಅಭಿಮಾನಿಗಳ ವ್ಯಾಪ್ತಿ ಬಾಲಿವುಡ್ ಮಾಲಿವುಡ್ ಅಂಗಳವನ್ನು ದಾಟಿದೆ. ಎಲ್ಲಾ ಚಿತ್ರ ರಂಗದ ನಟರು ಪುನೀತ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಂಬುದು ಇವರ ಸರಳತೆ ಮತ್ತು ಅದ್ಭುತ ನಟನೆಗೆ ದೊರೆತ ಕೀರ್ತಿ ಎಂದರೆ ಸುಳ್ಳಾಗದು.
ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ವಿಚಾರ ತಿಳಿದ ಕೂಡಲೇ‌ ವಿಕ್ರಮ್ ಆಸ್ಪತ್ರೆಗೆ ತೆರಳಿದ್ದಾರೆ, ತಮ್ಮ ಎಲ್ಲಾ‌ ಪ್ರವಾಸವನ್ನು ಮುಂದೂಡಿದ್ದಾರೆ.

“ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಸಹೃದಯ ಬಂಧುವನ್ನು ಕಳೆದುಕೊಂಡಿದ್ದೇನೆ. ಅವರ ಉತ್ಸಾಹ, ಪ್ರತಿಭೆ, ಅವರ ಅನೇಕ ಅತ್ಯುತ್ತಮ ಚಲನಚಿತ್ರಗಳನ್ನು, ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ನಾಡಿನ ಸಮಸ್ತ ಜನತೆಯ ಮನೆ, ಮನ ತಲುಪಿದ್ದ ಅವರ ವ್ಯಕ್ತಿತ್ವವನ್ನು ಮರೆಯುವುದು ಸಾಧ್ಯವೇ ಇಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ.”

“ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂಯಮದಿಂದ ವರ್ತಿಸಿ: ಅಭಿಮಾನಿಗಳಿಗೆ ಮನವಿ
ಈ ದುಃಖಕರ ಸನ್ನಿವೇಶದಲ್ಲಿ, ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ, ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿಗಳು ಪುನೀತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಇವರಿಗೆ ಬೆಳಗಿನ ಜಾವ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು.ಈ ಹಿನ್ನೆಲೆಯಲ್ಲಿ ತಮ್ಮ ಫ್ಯಾಮಿಲಿ ಡಾಕ್ಟರ್ ಬಳಿ‌ ಹೋಗಿ‌ ಬಳಿಕ ಅಲ್ಲಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಇವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಲಾಗಿತ್ತು, ಐಸಿಯುನಲ್ಲಿ ಚಿಕಿತ್ಸೆ ಇದ್ದಂತಹ ಪುನೀತ್ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರು ಏಳೆದಿರುವುದು ನಂಬಲಾರದ ವಿಚಾರ.
ತಮ್ಮ ಸರಳೆತೆ ಮತ್ತು ನಗು ಮುಖದಿಂದ ಪುನೀತ್ ಚಿತ್ರರಂಗದ ಎಲ್ಲರ ಅಚ್ಚು ಮೆಚ್ಚಿನ ‘ಅಪ್ಪು’ ಎಂದೇ ಫೇಮಸ್ ಆಗಿದ್ದರು.
ಪುನೀತ್‌ ಅವರ ಪಾರ್ಥೀವ ಶರೀರವನ್ನು ತಮ್ಮ ಸದಾಶಿವ ನಗರದ ನಿವಾಸದಲ್ಲಿ ಇರಿಸಲಾಗಿದೆ.
ಕಂಠೀರವ ಸ್ಟೂಡಿಯೋದಲ್ಲಿ ತಮ್ಮ ಪಾರ್ಥೀವ ಶರೀರವನ್ನು ಅಭಿಮಾನಿಗಳಿಗೆ ನೋಡಲು ಅವಕಾಶ ಒದಗಿಸಿದ್ದಾರೆ.ಭಾನುವಾರ ಬೆಳಗ್ಗೆ ಅಂತ್ಯ ಕ್ರೀಯೆಗೆ ತಯಾರು ನಡೆಸಲಾಗುತ್ತಿದೆ.

ಪುನೀತ್ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದ ತಂದೆ ರಾಜ್ ಕುಮಾರ್ ಹಾದಿ ಹಿಡಿದು ನೇತ್ರ ದಾನ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಕನ್ನಡ ಚಿತ್ರರಂಗಕ್ಕೆ ಪುನೀತ್ ಕೊಡುಗೆ ಅಪಾರ. ಬಾಲ್ಯದಲ್ಲೇ ಅದ್ಭುತ ನಟನೆಯಿಂದ ಅಭಿಮಾನಿ ಸಾಗರವನ್ನು ಗಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4283
Swathi M G

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು