News Karnataka Kannada
Friday, May 03 2024
ಸಾಂಡಲ್ ವುಡ್

ನೈಜ ಘಟನೆ ಆಧಾರಿತ ‘ಕನ್ನೇರಿ’ ನಾಳೆ ರಾಜ್ಯಾದ್ಯಂತ ರಿಲೀಸ್..!

Kanneri
Photo Credit : News Kannada

ಈಗಾಗಲೇ ಸಾಂಗ್ಸ್ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಕನ್ನೇರಿ ನಾಳೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಕಾಡಿನ ಜನರ ಬದುಕು ಬವಣೆ ಹೊತ್ತ ಸಿನಿಮಾ ಇದಾಗಿದೆ. ಹೀಗಾಗಿಯೇ ರಿಲೀಸ್ ಗೂ ಮುನ್ನವೇ ಸಾಕಷ್ಟು ಪ್ರಶಂಸೆಗೂ ಕಾರಣವಾಗಿದೆ.

ಮೂಕಹಕ್ಕಿ ಖ್ಯಾತಿಯ ನೀನಾಸಂ ಮಂಜು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮನಮುಟ್ಟುವಂತ ಹಾಡುಗಳು ಈ ಸಿನಿಮಾದಲ್ಲಿವೆ.  ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಜನರ ಹೋರಾಟ ಈ ಚಿತ್ರಕ್ಕೆ ಸ್ಪೂರ್ತಿ.. ಅಲ್ಲಿನ ಹೋರಾಟ‌ ಮುಗಿದ ಬಳಿಕ ಜನ ಏನು ಮಾಡ್ತಿದ್ದಾರೆ, ಹೆಣ್ಣು ಮಕ್ಕಳ ಸ್ಥಿತಿ ಏನು, ಬದುಕು ಕಟ್ಟಿಕೊಳ್ಳಲು ಎತ್ತ ಸಾಗಿದ್ರು, ಹೀಗೆ ಹಲವು ವಿಚಾರಗಳನ್ನು ಮಹಿಳಾ ಪ್ರಧಾನ ಸಿನಿಮಾವಾಗಿ ತೆರೆ ಮೇಲೆ ಕನ್ನೇರಿ ಮೂಲಕ ತರುತ್ತಿದ್ದಾರೆ ನೀನಾಸಂ ಮಂಜು.

ಈ ಸಿನಿಮಾದ ಅಪ್ಡೇಟ್ ಗಳೇ ಈಗಾಗಲೇ ಸಾಕಷ್ಟು ಜನರ ಮನಸ್ಸಿನ ಕದ ತಟ್ಟಿದೆ. ಇನ್ನೇನಿದ್ರು ಸಿನಿಮಾದ ಒಳಗೇನಿದೆ, ಸಿನಿಮಾ ಮಾಡಲು ಪಟ್ಟ ಪರಿಶ್ರಮವೇನು ಎಂಬುದನ್ನಷ್ಟೇ ತಿಳಿಯಬೇಕಿದೆ. ಕಮರ್ಷಿಯಲ್ ಕಾಲದಲ್ಲೂ ಕಲಾತ್ಮಕ ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಅದನ್ನು ಕಮರ್ಶಿಯಲ್ ವೇನಲ್ಲಿ ಕಟ್ಟಿಕೊಡೋದು ಸಾಹಸವೇ ಸರಿ ಅಂತಹದ್ದೊಂದು ಕೆಲಸಕ್ಕೆ ನೀನಾಸಂ ಮಂಜು ಕೈ ಹಾಕಿದ್ದಾರೆ. ಅದರ ಫಲಿತಾಂಶ ನಾಳೆ ದೊರಕಲಿದೆ.

ಚಿತ್ರದಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ್ ಒಳಗೊಂಡ ಅನುಭವಿ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ
ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು