News Karnataka Kannada
Sunday, April 28 2024
ಸಾಂಡಲ್ ವುಡ್

ಗಾಜನೂರಿನಲ್ಲಿ ನಟ ಶಿವರಾಜ್ ಕುಮಾರ್ ರಿಲ್ಯಾಕ್ಸ್….

Shivrajkumar Film2 01082021
Photo Credit :

ಚಾಮರಾಜನಗರ: ವರನಟ ನಟ ಡಾ. ರಾಜ್ ಕುಮಾರ್ ರವರ ಪುತ್ರ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಹುಟ್ಟೂರು ಗಾಜನೂರಿಗೆ ಆಗಮಿಸಿದ್ದು ಸುತ್ತಲ ಹಸಿರ ಪರಿಸರದಲ್ಲಿ ಅಡ್ಡಾಡುತ್ತಾ ರಿಲಾಕ್ಸ್ ಮೂಡಿನಲ್ಲಿರುವ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ತಮ್ಮ ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ತಮಿಳುನಾಡು ಜಿಲ್ಲೆಯ ತಾಳವಾಡಿ ತಾಲ್ಲೂಕಿನ ದೊಡ್ಡಗಾಜನೂರಿಗೆ ಆಗಮಿಸಿರುವ ಅವರು ತಮ್ಮ ತಂದೆ ಡಾ. ರಾಜ್ ಕುಮಾರ್ ರವರ ಅತ್ಯಂತ ಪ್ರೀತಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಶುಕ್ರವಾರ ದೊಡ್ಡಗಾಜನೂರಿಗೆ ಬಂದ ಅವರು ತಮ್ಮ ತೋಟದಲ್ಲಿ ಸುತ್ತಾಟ ನಡೆಸಿ ನಿಸರ್ಗ ಸೌಂದರ್ಯವನ್ನು ಸವಿದರು.

ಬಳಿಕ ಡಾ. ರಾಜ್ ಕುಮಾರ್ ಯೋಗಾಭ್ಯಾಸ ಮಾಡುತ್ತಿದ್ದ ಆಲದ ಮರದ ಕೆಳಗೆ ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಒಂದಷ್ಟು ಸಮಯವನ್ನು ಕಳೆದರು.ಇದೀಗ ಆಲದ ಮರದ ಕೆಳಗೆ ಕುಳಿತ, ನಿಂತ ಮತ್ತು ಪತ್ನಿ ಗೀತಾ ಅವರೊಂದಿಗೆ ನಿಂತ ಒಂದಷ್ಟು ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಅದೀಗ ವೈರಲ್ ಆಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು