News Karnataka Kannada
Friday, May 10 2024
ಸಾಂಡಲ್ ವುಡ್

ನಿಖೀಲ್‌ ಕುಮಾರ್‌ ನಟಿಸಿರುವ “ರೈಡರ್‌’ ಸಿನಿಮಾ ಡಿಸೆಂಬರ್‌ 24ರಂದು ತೆರೆ

Nikhil Kumarswami
Photo Credit :

ನಿಖೀಲ್‌ ಕುಮಾರ್‌ ನಾಯಕರಾಗಿರುವ “ರೈಡರ್‌’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಸಿನಿ ಪ್ರೇಮಿಗಳಲ್ಲಿತ್ತು. ಈಗ ಚಿತ್ರತಂಡ ಅದಕ್ಕೆ ಉತ್ತರಿಸಿದೆ. “ರೈಡರ್‌’ ಡಿಸೆಂಬರ್‌ 24ರಂದು ತೆರೆಕಾಣುತ್ತಿದ್ದು, ಈ ಮೂಲಕ ಕ್ರಿಸ್‌ಮಸ್‌ ಗಿಫ್ಟ್ ನೀಡಿದೆ.

ಈ ಚಿತ್ರವನ್ನು ತೆಲುಗು ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಲಹರಿ ಹಾಗೂ ಶಿವನಂದಿ ಬ್ಯಾನರ್‌ನಲ್ಲಿ ಚಂದ್ರು ಮನೋಹರನ್‌ ಹಾಗೂ ಸುನೀಲ್‌ ಗೌಡ ಸೇರಿ ನಿರ್ಮಿಸಿದ್ದಾರೆ.

ನಿಖೀಲ್‌ ಅವರನ್ನು ಹೀಗೆಯೇ ತೋರಿಸಬೇಕು, ಈ ತರಹದ್ದೇ ಗೆಟಪ್‌ ಬೇಕು ಕಾರಣಕ್ಕೆ ಯಾವುದಕ್ಕೂ ಕಾಂಪ್ರಮೈಸ್‌ ಆಗದೇ ಸಿನಿಮಾ ನಿರ್ಮಿಸಿದ್ದಾರೆ. ಇದೊಂದು ಪಕ್ಕಾ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾವಾಗಿದ್ದು, ಪಕ್ಕಾ ಪೈಸಾ ವಸೂಲ್‌ ಸಿನಿಮಾವಾಗಲಿದೆ ಎಂಬುದು ಚಿತ್ರತಂಡದ ಮಾತು.

“ರೈಡರ್‌’ ಚಿತ್ರದಲ್ಲಿ ನಿಖೀಲ್‌ ಇಲ್ಲಿ ಒಬ್ಬ ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಲೈಪ್‌ನಲ್ಲಿ ಏನೇನು ನಡೆಯುತ್ತ ದೆ ಅನ್ನೋದರ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಇದರಲ್ಲಿ ನಿಖೀಲ್‌ ಅವರದು ಮಧ್ಯಮ ವರ್ಗದ ಹುಡುಗನ ಪಾತ್ರ.

ಇದರಲ್ಲಿ ಲವ್‌, ಆಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಶನ್ಸ್‌ ಎಲ್ಲವೂ ಇರಲಿದೆ. ಈ ಸಿನಿಮಾವನ್ನು ಕನ್ನಡ, ತೆಲುಗು ಎರಡೂ ಭಾಷೆಯಲ್ಲೂ ಮಾಡಲಾಗಿದೆ. ಕನ್ನಡ, ತೆಲುಗು ಚಿತ್ರರಂಗದ ಪ್ರಸಿದ್ಧ ಕಲಾವಿದರು, ತಂತ್ರಜ್ಞರು ಸಿನಿಮಾದಲ್ಲಿ ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು