ಬೆಂಗಳೂರು: ಡ್ರಗ್ಸ್ ಸೇವಿಸಿರುವುದು ಖಚಿತ ಎಂದು ವರದಿಯಾಗುತ್ತಿದ್ದಂತೆಯೇ ಇತ್ತ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೌದು. ಮಗಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಈ ಹಿಂದೆ ಸಂಜನಾಗೆ ಸರ್ಜರಿ ಆಗಿತ್ತು. ಹೀಗಾಗಿ ರಾತ್ರಿಯೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಮೆಂಟಲಿ ಅಪ್ ಸೆಟ್ ಆಗಿದ್ದಾರೆ ಎಂದು ನಟಿ ಸಂಜನಾ ತಾಯಿ ರೇಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಸದ್ಯ ಆಕೆ ಈ ಕೇಸ್ ನಿಂದ ಡಿಸ್ಟರ್ಬ್ ಆಗಿದ್ದಾಳೆ. ಪದೇ ಪದೇ ಇದೇ ಕೇಸ್ ಬಗ್ಗೆ ಕೇಳಿ ಡಿಪ್ರೆಶನ್ ಗೆ ಹೋಗಿದ್ದಾಳೆ. ಹುಷಾರಿಲ್ಲದ ಕಾರಣ ಆಕೆಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ನನ್ನ ಮಗಳು ಏನೂ ತಪ್ಪು ಮಾಡಿಲ್ಲ. ಆದರೆ ದುರಾದೃಷ್ಟದಿಂದ ಈತರ ಎಲ್ಲಾ ಆಗ್ತಿದೆ. ನಾವು ಭಗವಾನ್ ನನ್ನ ನಂಬ್ತೀವಿ. ದೇವರ ದಯೆಯಿಂದ ನಾಲ್ಕು ಜನರಿಗೆ ಸಹಾಯ ಮಾಡುತ್ತಿದ್ದೇವೆ. ಹುಷಾರಿಲ್ಲದ ಕಾರಣ ನಂಗೆ ಊಟ ನೀಡೋಕೆ ಹೇಳಿದಳು ಎಂದರು.