ನಟ ಧನಂಜಯ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಹರಿದುಬರುತ್ತಿವೆ.
‘ಟಗರು’ ತೆರೆಕಂಡ ನಂತರದಲ್ಲಿ ಡಾಲಿ ಎಂದೇ ಖ್ಯಾತಿ ಪಡೆದ ಧನಂಜಯ ಅವರು ಕನ್ನಡದ ಬಹುಬೇಡಿಕೆಯ ಕಲಾವಿದ. ಪ್ರತಿ ಸಿನಿಮಾಗೂ ಬೇರೆಬೇರೆ ರೀತಿಯ ಪಾತ್ರ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನಂಜಯ ಹತ್ತಿರವಾಗಿದ್ದಾರೆ.
ಸದ್ಯ ಧನಂಜಯ ಕನ್ನಡ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಶೂಟಿಂಗ್ ಒಂದಕ್ಕಾಗಿ ಅವರು ಚೆನ್ನೈಗೆ ತೆರಳಿದ್ದಾರೆ. ಹೀಗಾಗಿ, ಈ ಬಾರಿ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ.