News Karnataka Kannada
Tuesday, May 07 2024
ಸಾಂಡಲ್ ವುಡ್

ಖಾಕಿ ಧರಿಸಿ ‘ಖಡಕ್’ ಆಗಿ ಎಂಟ್ರಿಕೊಟ್ಟ ನಟ ಧರ್ಮ ಕೀರ್ತಿರಾಜ್

Khadak Film
Photo Credit :

ಬೆಂಗಳೂರು : ಲವರ್ ಬಾಯ್ ಅವತಾರದಲ್ಲಿಯೇ ಇಷ್ಟು ದಿನ ಕಾಣಿಸಿಕೊಳ್ಳುತ್ತಿದ್ದ ಧರ್ಮ ಕೀರ್ತಿರಾಜ್, ಮೊದಲ ಸಲ ಖಾಕಿ ಧರಿಸಿ ‘ಖಡಕ್’ ಆಗಿಯೇ ಎಂಟ್ರಿಕೊಟ್ಟಿದ್ದಾರೆ. ‘ಖಡಕ್’ ಚಿತ್ರದಲ್ಲಿ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ನಟಿಸಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಹಾಡುಗಳು ಬಿಡುಗಡೆ ಆಗಿವೆ.

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ವಿನೋದ್ ಪ್ರಭಾಕರ್, ಪ್ರಥಮ್ ಆಗಮಿಸಿ ಆಡಿಯೋ ರಿಲೀಸ್ ಮಾಡಿ ಶುಭ ಕೋರಿದ್ದಾರೆ.

‘ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಮೊದಲ ಸಲ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ’ ಎಂದು ಧರ್ಮ ಹೇಳಿದರೆ, ‘ಒಂದೊಳ್ಳೆಯ ತಂಡದ ಜತೆಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರದ ಭಾಗವಾಗಿದ್ದಕ್ಕೆ ಖುಷಿಯಿದೆ’ ಎಂದರು ನಾಯಕಿ ಅನುಷಾ. ಸಂಗೀತ ನಿರ್ದೇಶಕ ಕೃಪಾಕರ್ ಮಾತನಾಡಿ, ‘ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಅದರಲ್ಲೊಂದು ದೇಶಭಕ್ತಿ ಗೀತೆಯೂ ಇದೆ. ಎಂದಿನಂತೆ ಈ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಹಾಡಲು ಅವಕಾಶ ನೀಡಿದ್ದೇನೆ’ ಎಂದರು.

ನಂದಿನಿ ಕಂಬೈನ್ಸ್ ಮೂಲಕ ಸಿದ್ಧವಾಗಿರುವ ಈ ಚಿತ್ರಕ್ಕೆ ಟಿ.ಎನ್. ನಾಗೇಶ್ ನಿರ್ದೇಶನ ಮಾಡಿದರೆ, ವಲ್ಲಿ ಮತ್ತು ಸಿಂಗಾಪುರ ಸಿದ್ದರಾಮಯ್ಯ ಬಂಡವಾಳ ಹೂಡಿದ್ದಾರೆ. ಕಬೀರ್ ದುಹಾನ್ ಸಿಂಗ್ ಇಲ್ಲಿ ‘ಖಡಕ್’ ಖಳನಾಗಿದ್ದಾರೆ. ಇನ್ನುಳಿದಂತೆ ಸುಮನ್, ಕಮಲ್ ಸೇರಿ ಹಲವರು ಸಿನಿಮಾದಲ್ಲಿದ್ದಾರೆ. ಎಂ.ಎನ್. ಶಂಕರ್ ಛಾಯಾಗ್ರಹಣ ಮಾಡಿರುವ ಈ ಚಿತ್ರದ ಹಾಡುಗಳ ಹಕ್ಕನ್ನು ನಮ್ಮ ಮ್ಯೂಸಿಕ್ ಸಂಸ್ಥೆ ಪಡೆದುಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು