News Karnataka Kannada
Tuesday, May 07 2024
ಸಾಂಡಲ್ ವುಡ್

ಕೇವಲ 5 ಲಕ್ಷಗಳಲ್ಲಿ ಕನ್ನಡ ಚಿತ್ರ ತಯಾರಿಸಿದ ಗೌತಮ್ ಕಾನಡೆ

Stability
Photo Credit : By Author

ಇತ್ತೀಚೆಗೆ ಬಿಡುಗಡೆ ಆದ ಕನ್ನಡ ಚಲನಚಿತ್ರ ಸ್ಟೆಬಿಲಿಟಿ (Stabiliti) ಯ ಲೇಖಕ, ನಿರ್ಮಾಪಕ ಮತ್ತು ನಿರ್ದೇಶಕ ಗೌತಮ್‌ ಕಾನಡೆ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮೂಲತಹ IT professional ಆದ ಗೌತಮ್ ಅವರಿಗೆ ಕಾಲೇಜ್ ದಿನಗಳಿಂದಲೇ ಕಿರುಚಿತ್ರಗಳನ್ನು ಮಾಡುವ ಹುಚ್ಚು. “WHO..?” ಎಂಬ ಒಂದು ಕನ್ನಡ ಕಿರುಚಿತ್ರದೊಂದಿಗೆ ಅವರ ಸಿನಿಮಾ ಪ್ರಯಾಣ ಪಾರಂಭವಾಯಿತು.

ಇದಾದ ನಂತರ ಇದೇ ಸರಣಿಯಲ್ಲಿ 4 ಚಿತ್ರಗಳನ್ನು ಮಾಡಿದರು. ಈ ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ, ಹಿನ್ನೆಲೆ ಸಂಗೀತ, ನಿರ್ಮಾಣ ಮತ್ತು ನಿರ್ದೇಶನ ಇವರದ್ದೇ ಆಗಿಯೂ, ಇವೆಲ್ಲರಲ್ಲಿ ನಾಯಕನಾಗಿ ಕೂಡ ಅಭಿನಯಿಸಿದ್ದಾರೆ. ನನಗೆ ನಟನೆ ಗಿಂತ technical ಕೆಲಸ ತುಂಬ ಇಷ್ಟ ಎಂದ ಗೌತಮ್ ಅವರು ಇಂಗ್ಲಾಂಡಿನಲ್ಲಿ ಕೂಡ ಚಿತ್ರಗಳನ್ನು ಮಾಡಿದ್ದಾರೆ.

“WHO:4” ಚಲನಚಿತ್ರ ಹಾಗು “End – A New Beginning” ಎಂಬ ಆಂಗ್ಲ ಭಾಷೆಯ ಕಿರುಚಿತ್ರ ಇವರು ಇಂಗ್ಲಾಂಡಿನ ಕಲಾವಿದರೊಂದಿಗೆ ಮಾಡಿದ್ದಾರೆ. ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶಿಸಿದ India vs England” ಚಿತ್ರದಲ್ಲಿ ಕೂಡ ಗೌತಮ್ ಅವರು ಕೆಲಸ ಮಾಡಿದ್ದಾರೆ, ಅವರು “Stabiliti” ಎಂಬ science-fiction crime thriller ಚಿತ್ರ ನಮ್ಮ ಕನ್ನಡ ಭಾಷೆಯಲ್ಲಿ ಮಾಡಬೇಕೆಂದು ತಮ್ಮ ಇಂಗ್ಲಾಂಡಿನ IT ಕೆಲಸವನ್ನು ಬಿಟ್ಟು 2019ರಲ್ಲಿ ಬೆಂಗಳೂರಿಗೆ ಬಂದರು. ಅದರೆ ಅವರು ಅಂದುಕೊಂಡಿದ್ದ ಬೆಂಬಲ ಅವರಿಗೆ ಸಿಗಲಿಲ್ಲ. ತಮ್ಮ 7 ಕೆಲಸ ಬೆಂಗಳೂರಿನಲ್ಲೇ ಮುಂದುವರೆಸಿ, ತಾವೇ ಖುದ್ದಾಗಿ STABILITI ಚಿತ್ರವನ್ನು ತೆಗೆಯಬೇಕೆಂದು ನಿಶ್ಚಯಿಸಿದರು.

ಕೋವಿಡ್-19 ನ ಮೊದಲನೇಯ ಅಲೆಯ ಸಮಯದಲ್ಲೇ ಇವರು ಚಿತ್ರದ pre production ಕೆಲಸವನ್ನು ಪ್ರಾರಂಭಿಸಿದರು. ಬೆಂಗಳೂರು, ಹುಬ್ಬಳ್ಳಿ, ಹಾಸನ ಹಾಗು ಕೊಕ್ಕಡದಲ್ಲಿ ಚಿತ್ರೀಕರಣ ಮಾಡಿದ್ದು, ಅಕ್ಟೋಬರ್ 2021ರಲ್ಲಿ premiere show ಮಾಡಿದರು. ಈ ಚಿತ್ರದ ವಿಷೇಶತೆ ಏನಂದರೆ, ಈ ಚಿತ್ರದ ಕಲಾವಿದರೆಲ್ಲರೂ IT professionals ಆಗಿದ್ದು, ಎಲ್ಲ ಚಿತ್ರೀಕರಣ ಕೇವಲ ವಾರಾಂತ್ಯಗಳಲ್ಲಿ ಮಾಡಿದ್ದಾರೆ. 5 ಲಕ್ಷಕ್ಕಿಂತ ಕಡಿಮೆ ಖರ್ಚಾಗಿದ್ದು, ಈ ಚಿತ್ರ no-budget ಸಿನಿಮಾ ವರ್ಗಕ್ಕೆ ಸೇರುತ್ತದೆ. STABILITI ಎಂಬ ಆಂಗ್ಲ ಹೆಸರು ಯಾಕೆ ಅಂತ ಪ್ರಶ್ನಿಸಿದ್ದಕ್ಕೆ ಅವರು “ಇದು ಆಂಗ್ಲ ಪದ “stability ಅಲ್ಲ, ಹಾಗಾದರೆ “stabiliti” ಅಂದರೇನು ಅಂತ ತಿಳಿದುಕೊಳ್ಳಲು ನೀವು ಚಿತ್ರವನ್ನು ನೋಡಬೇಕು” ಎಂದರು ಗೌತಮ್, ಈ ಚಿತ್ರದ ಚಿತ್ರಕಥೆಗೆ 9 ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳು ಬಂದಿದ್ದು, ಫೆಬ್ರವರಿ 2022 ಅಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿ, ಈಗ MX PLAYER OTT platform ನಲ್ಲಿ ಉಚಿತವಾಗಿ ನೋಡಲು ಲಭ್ಯವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು