ಲವ್ ಮಾಕ್ಟೇಲ್ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿಯ ಸೂಪರ್ ಡೂಪ್ ಹಿಟ್ ಸಿನಿಮಾ. ಆದಿ ನಿಧಿಮಾ ಮಾಡಿದ ಮೋಡಿ ಇಡೀ ಸೌತ್ ಸಿನಿ ರಂಗವನ್ನೇ ಆವರಿಸಿಕೊಂಡಿತ್ತು. ಇದೇ ಲವ್ ಮಾಕ್ಟೆಲ್ ಸಿನಿಮಾ ಟಾಲಿವುಡ್ನಲ್ಲಿ ರಿಮೇಕ್ ಆಗುತ್ತಿದೆ.
ಈ ಮಧ್ಯೆ ಕನ್ನಡದಲ್ಲಿ ಆದಿ ನಿಧಿಮಾ ಮುಂದುವರೆದ ಭಾಗ ಲವ್ ಮಾಕ್ಟೇಲ್-2 ಸಿನಿಮಾ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಮುಂದಿನ ವರ್ಷ ಫೆಬ್ರವರಿ 11ರಂದು ಲವ್ ಮಾಕ್ಟೇಲ್- 2 ಮೂಲಕ ಆದಿ ನಿಧಿಮಾ ಕಮಾಲ್ ಮಾಡಲಿದ್ದಾರೆ.
ಲವ್ ಮಾಕ್ಟೇಲ್ -2 ಅಪ್ಪಟ ಪ್ರೇಮ ಕಥೆಯ ಸಿನಿಮಾ. ಮಿಲನಾ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ನಿಜ ಜೀವನಲ್ಲಿ ಪ್ರೀತಿಸುತ್ತಿದ್ದಾಗ ಲವ್ ಮಾಕ್ಟೆಲ್ -1 ಮಾಡಿದ್ದರು. ಈಗ ಮಿಲನಾ ಹಾಗೂ ಕೃಷ್ಣ ಪ್ರೀತಿಸಿ ಮದುವೆ ಆಗಿದ್ದಾರೆ. ಲವ್ ಮಾಡಿ ಮದುವೆ ಆದ ಈ ಜೋಡಿ ಈಗ ಪ್ರೇಮಿಗಳಿಗಾಗೆ ಲವ್ ಮಾಕ್ಟೇಲ್ ಪಾರ್ಟ್-2 ಸಿನಿಮಾವನ್ನ ಸಿದ್ಧಪಡಿಸಿದ್ದಾರೆ. ಲವ್ ಎಮೋಷನ್ ಬ್ಲೆಂಡ್ ಮಾಡಿ ಕತೆ ಹೆಣೆದಿರೋ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್- 2ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡಲಿದ್ದಾರೆ. ಫೆಬ್ರವರಿ 11ಕ್ಕೆ ಲವ್ ಮಾಕ್ಟೈಲ್ – 2 ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ ಆಗಿರೋದ್ರಿಂದ ಮೂರು ದಿನ ಮೊದಲೇ ಲವ್ ಮಾಕ್ಟೇಲ್ -2 ತೆರೆ ಮೇಲೆ ಬರ್ತಿದೆ.