ಎಸ್. ಮಹೇಶ್ ನಿರ್ದೇಶದಲ್ಲಿ ಮೂಡಿಬಂದಿರುವ ಚಿತ್ರ ಮದಗಜ ಇದೀಗ ಭರ್ಜರಿ ಕಲೆಕ್ಷನ್ ಪಡೆಯುತ್ತಿದೆ. 900ಕ್ಕೂ ಹೆಚ್ಚು ಸ್ಕ್ರೀನ್ ಗಳ ಮೆಲೆ ಬಿಡುಗಡೆಯಾದ ಈ ಚಿತ್ರಕ್ಕೆ ಮೊದಲನೇ ದಿನವೇ 7.5 ಕೋಟಿ ರೂ. ಗಳಿಸಿತ್ತು.
ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರ ಬೆಂಗಳೂರು, ಕೋಲಾರ, ತುಮಕೂರು 11 ಕೋಟಿ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ 5.13 ಕೋಟಿ ರೂ., ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ 3.7 ಕೋಟಿ ರೂ., ದಾವಣಗೆರೆ 1 .5 ಕೋಟಿ ರೂ., ಹೈದರಾಬಾದ್ ಕರ್ನಾಟಕದಲ್ಲಿ 4.5 ಕೋಟಿ ರೂ. ಗಳಿಸಿದೆ.
7 ದಿನಕ್ಕೆ ಬರೋಬ್ಬರಿ 25.83 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲೂ ರೆಕಾರ್ಡ್ ಮಾಡಿದೆ. ಉಮಾಪರಿ ಶ್ರೀನಿವಾಸ್ ನಿರ್ಮಾಣದಲ್ಲಿ ತೆರೆಗೆ ಬಂದ ಮದಗಜ ಇನ್ನೂ ಘರ್ಜಿಸುತ್ತಿದೆ.