ಪ್ರೇಮ್ ನಿರ್ದೇಶನದ ರಕ್ಷಿತಾ ಸಹೋದರ ರಾಣಾ ನಾಯಕ ನಟನಾಗಿ ಅಭಿನಯಿಸಿರುವ ‘ಏಕ್ ಲವ್ ಯಾ’ ಚಿತ್ರದ ‘ಕೇಳ್ರಪ್ಪೋ ಕೇಳಿ’ ಎಂಬ ಹಾಡನ್ನು ನವೆಂಬರ್ 4ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮುಂದಿನ ವರ್ಷ ಜನವರಿ 21ರಂದು ಈ ಸಿನಿಮಾ ತೆರೆಮೇಲೆ ಬರಲಿದೆ.
ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರೊಮ್ಯಾಂಟಿಕ್ ಲವ್ ಸ್ಟೋರಿ ಆಧಾರಿತ ಈ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರೇಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಮಾಡಲಿದ್ದಾರೆ.