ಬೆಂಗಳೂರು : ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ವಿಶ್ವದಾದ್ಯಂತ ಇಂದು ರಿಲೀಸ್ ಆಗಿದ್ದು. ಸಿನೆಮಾ ನೋಡಲು ಎಲ್ಲಾ ಕಡೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. 4000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣ್ತಾ ಇದೆ.
ಪುನೀತ್ ಅವರ ಹುಟ್ಟುಹಬ್ಬದ ದಿನದಂದೇ ಚಿತ್ರವನ್ನು ರಿಲೀಸ್ ಮಾಡಲಾಗಿದೆ.
ಮೊದಲ ಪ್ರದರ್ಶನ ವೀಕ್ಷಿಸಿದ ಅಪ್ಪು ಫ್ಯಾನ್ಸ್, ಜೈಕಾರ ಹಾಕಿದ್ದಾರೆ. ಕೆಲವೆಡೆ ಥಿಯೇಟರ್ ನಲ್ಲೇ ಕುಣಿದು ಸಂಭ್ರಮಿಸಿದ್ದಾರೆ. ಆದ್ರೆ ಇದೇ ಸಂದರ್ಭದಲ್ಲಿ ಅಪ್ಪುವನ್ನು ನೆನೆದು ಕಣ್ಣೀರಾಗಿದ್ದಾರೆ.
ಅಲ್ಲಲ್ಲಿ ಪುನೀತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ ಅಭಿಮಾನಿಗಳು. ಬೆಂಗಳೂರಿನ ವೀರೇಶ್ ಥಿಯೇಟರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಪುನೀತ್ ರ ಬೃಹತ್ ಕಟೌಟ್ ಗಳು ರಾರಾಜಿಸ್ತಾ ಇವೆ. ರಾಜ್ಯದ ಮೂಲೆ ಮೂಲೆಗಳಲ್ಲೂ ಸಂಭ್ರಮ ಮನೆಮಾಡಿದೆ.
ಬೆಳಗಿನ ಜಾವ 4.40ಕ್ಕೆ ಹೊಸಪೇಟೆಯ ಬಾಲಾ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರ ಮೊದಲ ಬಾರಿಗೆ ಪ್ರದರ್ಶನ ಕಂಡ್ತು. ಅಪ್ಪುವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಥಿಯೇಟರ್ ಗೆ ಹರಿದು ಬಂದಿದ್ದರು.