ಬೆಂಗಳೂರು, -ಮೊಬೈಲ್ನಿಂದಾಗುವ ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಸಿಕೊಡುವ ಒಂದು ಅದ್ಭುತ ಮಕ್ಕಳ ಸಿನಿಮಾವನ್ನು ಖ್ಯಾತ ಸಾಹಿತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಡಾ.ದೊಡ್ಡರಂಗೇಗೌಡರ ನಿರ್ದೇಶನದಲ್ಲಿ ನಮ್ಮ ಫ್ಲಿಕ್ಸ್ ಸಂಸ್ಥೆ ಹೊರತಂದಿದೆ. ಈ ಮಕ್ಕಳ ಸಿನಿಮಾದ ಹೆಸರು ಹಾರುವ ಹಂಸಗಳು. ಡಾ.ದೊಡ್ಡರಂಗೇಗೌಡರು ರಚಿಸಿದ ಆತಂಕ ಎಂಬ ಕೃತಿಯನ್ನು ಆಧರಿಸಿ ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ನಟನೆಯಲ್ಲೂ ತೊಡಗಿಸಿಕೊಂಡಿರುವುದಲ್ಲದೆ ಇದೇ ಮೊದಲ ಬಾರಿಗೆ ಈ ಚಲನಚಿತ್ರಕ್ಕ ಆ್ಯಕ್ಷನ್ ಕಟ್ ಸಹ ಹೇಳಿದ್ದಾರೆ. ದೀಪಾಂಕರ್ ಫಿಲಂ ಚಲನಚಿತ್ರವನ್ನು ಅರ್ಪಿಸುತ್ತಿದೆ.
ಇದೊಂದು ಕಲಾತ್ಮಕ ಮತ್ತು ಶೈಕ್ಷಣಿಕ ಚಿತ್ರ. ಪಟ್ಟಣದ ಮಕ್ಕಳಿಗೆ ಹಳ್ಳಿ ಮತ್ತು ಹಳ್ಳಿಯ ಬದುಕಿನ ದರ್ಶನವನ್ನು ಈ ಚಲನಚಿತ್ರದ ಮೂಲಕ ಮಾಡಿಸಿದ್ದಾರೆ. ಈ ಚಿತ್ರದಲ್ಲಿ ಮೊಬೈಲ್ನಿಂದಾಗುವ ಅನುಕೂಲ, ಅನಾನುಕೂಲ ತಿಳಿಸಿಕೊಟ್ಟಿದ್ದಾರದೆ ನಗರ ಜೀವನದಲ್ಲಿ ಮೊಬೈಲ್ ಘೀಳಿಗೆ ಅಂಟಿಕೊಂಡು ಮಕ್ಕಳು ಮತ್ತು ವಯಸ್ಕರು ಜೀವನದಲ್ಲಿ ಹೇಗೆ ಹತಾಶರಾಗಿರುತ್ತಾರೆ, ಇದರಿಂದ ಸುತ್ತಮುತ್ತಲಿನ ಮತ್ತು ಮನೆಯವರ ಮನಸ್ಸಿಗೆ ಎಂಥ ಬೇಸರವನ್ನು ತಂದಿರುತ್ತಾರೆ ಎಂಬುದನ್ನೇ ಒಂದು ಸುಂದರ ಕಥೆಯನ್ನಾಗಿ ಮಾಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರವು ಒಟಿಟಿ ಪ್ಲಾಟ್ ಫಾರಂ ನಲ್ಲಿ ಆಗಸ್ಟ್ 12 ರಂದು ಬಿಡುಗಡೆಗೊಂಡಿದೆ.
ಒಟಿಟಿ ಪ್ಲಾಟ್ಫಾರಂ ನಲ್ಲಿ ರಿಲೀಸ್ ಆದ ದೊಡ್ಡ ರಂಗೇ ಗೌಡರ ಹಾರುವ ಹಂಸಗಳು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.