ಮುಂಬೈ: ನಟಿ ಊರ್ವಶಿ ರೌತೆಲಾ ಅವರು ರಿಷಭ್ ಶೆಟ್ಟಿ ಅಭಿನಯದ ‘ಕಾಂತಾರಾ 2’ ಚಿತ್ರದ ಭಾಗವಾಗಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.
ಊರ್ವಶಿ ಇನ್ಸ್ಟಾಗ್ರಾಮ್ ನಲ್ಲಿ ರಿಷಬ್ ಅವರೊಂದಿಗೆ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
“#ಕಾಂತಾರಾ 2 @ರಿಷಬ್ ಶೆಟ್ಟಿ ಆಫೀಶಿಯಲ್ @ಹೊಂಬಾಳೆ ಫಿಲ್ಮ್ಸ್ ” ಎಂದು ಅವರು ಶೀರ್ಷಿಕೆಯಾಗಿ ಬರೆದಿದ್ದಾರೆ. ಊರ್ವಶಿ ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ‘ವಾಲ್ಟೇರ್ ವೆರಯ್ಯ’ ಚಿತ್ರದಲ್ಲಿ ‘ಬಾಸ್ ಪಾರ್ಟಿ’ ಹಾಡಿನಲ್ಲಿ ಕಾಣಿಸಿಕೊಂಡರು.
ಊರ್ವಶಿ ಮುಂದಿನ ದಿನಗಳಲ್ಲಿ ರಾಮ್ ಪೋತಿನೇನಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ‘ಇನ್ಸ್ಪೆಕ್ಟರ್ ಅವಿನಾಶ್’ ಚಿತ್ರದಲ್ಲಿ ರಾಮ್ ಪೋತಿನೇನಿ ರಣದೀಪ್ ಹೂಡಾ ಅವರ ಸಹನಟರಾಗಲಿದ್ದಾರೆ.