News Karnataka Kannada
Sunday, May 05 2024
ಸಾಂಡಲ್ ವುಡ್

ಜಪಾನ್‌ ಭಾಷೆಯಲ್ಲಿ ಯಶ್‌ ಹೇಳಿದ್ದೇನು, ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದ ನಟ

Here's what actor Yash said in Japanese, the actor created curiosity among fans
Photo Credit : Facebook

ಬೆಂಗಳೂರು: ಕೆಜಿಎಫ್‌ ಚಿತ್ರ ದೇಶ ವಿದೇಶದಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು ಎಲ್ಲಿರಿಗೂ ಗೊತ್ತಿದೆ. ಇದೀಗ ‘ಕೆಜಿಎಫ್’ ಚಾಪ್ಟರ್-1 ಹಾಗೂ ಚಾಪ್ಟರ್-2 ಜಪಾನ್‌ ದೇಶದಲ್ಲಿ ಬಿಡುಗಡೆ ಆಗುತ್ತಿದೆ.

ಮುಂದಿನ ವಾರವೇ ಅಲ್ಲಿನ ಥಿಯೇಟರ್‌ಗಳಲ್ಲಿ ರಾಕಿ ಭಾಯ್ ಆರ್ಭಟ ಶುರುವಾಗಲಿದೆ. ಈ ಹಿಂದೆ ನಟಿ ಶ್ರೀನಿಧಿ ಶೆಟ್ಟಿ ‘ಕೆಜಿಎಫ್’ ಸಿನಿಮಾ ಜಪಾನ್‌ನಲ್ಲಿ ರಿಲೀಸ್ ಆಗುವ ಬಗ್ಗೆ ಮಾತನಾಡಿದ್ದರು. ಇದೀಗ ಸ್ವತಃ ಯಶ್ ಕೂಡ ಸಿನಿಮಾ ರಿಲೀಸ್ ಬಗ್ಗೆ ಸ್ಪೆಷಲ್ ವಿಡಿಯೋ ಮಾಡಿ ಜಪಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಸದ್ಯ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ಪೆಷಲ್ ವಿಡಿಯೋ ಮಾಡಿ ಮಾತನಾಡಿರುವ ಯಶ್ ಆರಂಭದಲ್ಲಿ ಜಪಾನೀಸ್ ಭಾಷೆಯಲ್ಲೇ ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ್ದಾರೆ. ನಂತರ ಇಂಗ್ಲೀಷ್‌ನಲ್ಲಿ ಮಾತು ಮುಂದುವರೆಸಿದ್ದಾರೆ. “ನಮಸ್ತೆ ಜಪಾನ್ ನನ್ನ ‘ಕೆಜಿಎಫ್ ಚಾಪ್ಟರ್- 1 ಹಾಗೂ ‘ಕೆಜಿಎಫ್ ಚಾಪ್ಟರ್-2 ಸಿನಿಮಾಗಳು ಜಪಾನ್‌ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಕ್ತಿ, ಧೈರ್ಯ ಮತ್ತು ದೃಢಸಂಕಲ್ಪವನ್ನು ಒಳಗೊಂಡಿವೆ. ಇದೆಲ್ಲವೂ ಸಾಕಷ್ಟು ಮನರಂಜನೆ ಮತ್ತು ಅದ್ಭುತ ಆಕ್ಷನ್‌ ತುಂಬಿದೆ. ತಪ್ಪದೇ ಸಿನಿಮಾ ನೋಡಿ” ಎಂದು ಯಶ್ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು