ಬೆಂಗಳೂರು: ಕೋಮಲ್ ನಾಯಕರಾಗಿ ಅಭಿನಯಿಸುತ್ತಿರುವ ಉಂಡೆನಾಮ ಚಿತ್ರ ಏ.14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆಗೆ ಕೋಮಲ್ ಸಹೋದರ ನಟ ಜಗ್ಗೇಶ್ ಆಗಮಿಸಿದ್ದರು.
ಕರ್ನಾಟಕದ ಚಲನಚಿತ್ರ ನಿರ್ಮಾಪಕರ ಸಂಘದ ಉಮೇಶ್ ಬಣಕಾರ್ ಅತಿಥಿಗಳಾಗಿದ್ದರು. ಕೋಮಲ್ ಅವರಿಂದ ಕಾಮಿಡಿ ಮಾಡುವುದನ್ನು ಕಲಿಯಬೇಕು. ಅಷ್ಟು ಚೆನ್ನಾಗಿ ಕೋಮಲ್ ಅಭಿನಯಿಸುತ್ತಾರೆ ಎಂದರು. ಕೋಮಲ್ಗೆ ನಿರ್ದೇಶಕ ರಾಜಶೇಖರ್ ಹೇಳಿದ ಕಥೆ ಇಷ್ಟವಾಯಿತಂತೆ ಈ ನಿಟ್ಟಿನಲ್ಲಿ ನಟನೆಗೆ ಒಪ್ಪಿಕೊಂಡಿದ್ದನ್ನು ನೆನಪಿಸಿಕೊಂಡರು.