News Karnataka Kannada
Sunday, April 14 2024
Cricket
ವಿಶೇಷ

ಉಡುಪಿಯ ಐತಿಹಾಸಿಕ ಸಬ್‌ಜೈಲು ಕಟ್ಟಡ ಉಳಿಸಲು ಕಲಾವಿದರಿಂದ ವಿಶೇಷ ಅಭಿಯಾನ

Special campaign by artists, architects to save the old sub-jail building of historic Udupi
Photo Credit : News Kannada

ಉಡುಪಿ: ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣಗೊಂಡ ಸರಿಸುಮಾರು 117 ವರ್ಷಗಳ ಇತಿಹಾಸ ಇರುವ ಉಡುಪಿಯ ಹಳೆಯ ಸಬ್‌ಜೈಲು ಕಟ್ಟಡ ಇನ್ನು ಕೆಲವೇ ದಿನಗಳಲ್ಲಿ ಧರೆಗೆ ಉರುಳಲಿದೆ. ಈ ಪಾರಂಪರಿಕ ಕಟ್ಟಡವನ್ನು ರಕ್ಷಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಪ್ರಯತ್ನ ಹಾಗೂ ಅಭಿಯಾನಗಳು ನಡೆಯುತ್ತಿವೆ.

ಹಳೆಯ ಅತ್ಯಂತ ಸುಂದರವಾದ ಈ ಕಟ್ಟಡವನ್ನು ಉಳಿಸಲು ಆರ್ಕಿಟೆಕ್ಟ್‌ಗಳು ಹಾಗೂ ಕಲಾವಿದರು ಮುಂದಾಗಿದ್ದಾರೆ. ಅದಕ್ಕಾಗಿ ವಿಶಿಷ್ಟ ರೀತಿಯ ಅಭಿಯಾನ ವನ್ನು ಅವರು ಹಮ್ಮಿಕೊಂಡಿದ್ದಾರೆ.

ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್(ಇಂಟ್ಯಾಕ್) ಇದರ ಮಂಗಳೂರು ಶಾಖೆ ಹಾಗೂ ಉಡುಪಿ ಉಪಶಾಖೆಯ ಏಳೆಂಟು ಸದಸ್ಯ ಆರ್ಕಿಟೆಕ್ಟ್(ವಾಸ್ತುಶಿಲ್ಪಿಗಳು)ಗಳು ಕಳೆದ ಒಂದು ವಾರಗಳಿಂದ ಈ ಕಟ್ಟಡದ ರಚನೆಯ ಬಗ್ಗೆ ದಾಖಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಉಡುಪಿ ಮತ್ತು ಮಂಗಳೂರಿನ 12 ಕಲಾವಿದರು ಸೇರಿಕೊಂಡು ಈ ಕಟ್ಟಡದ ಕಲಾಕೃತಿಗಳನ್ನು ತಮ್ಮ ಕುಂಚದಲ್ಲಿ ರಚಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಕಟ್ಟಡವನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆ ಆಗಿದೆ. ಇಲ್ಲದಿದ್ದರೆ ಇದನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನಾದರೂ ಮುಂದೂಡಲಿ ಎಂಬುದು ನಮ್ಮ ಮನವಿ. ಯಾಕೆಂದರೆ ಇದರ ದಾಖಲೀಕರಣ ಮಾಡಲು ಇನ್ನಷ್ಟು ಸಮಯ ಅವಕಾಶ ಬೇಕು ಎನ್ನುತ್ತಾರೆ ಆರ್ಕಿಟೆಕ್ಟ್ ಶರ್ವಾನಿ ಭಟ್.
ಉಡುಪಿಯ ಹೃದಯ ಭಾಗದಲ್ಲಿರುವ ಈ ಹಳೆಯ ಕಟ್ಟಡ ಉಡುಪಿಯ ಆಸ್ತಿಯಾಗಿದೆ. ಇದನ್ನು ನೆಲಸಮಗೊಳಿಸಲು ಅವಕಾಶ ನೀಡದೆ.

ಪರ್ಯಾಯವಾಗಿ ಮ್ಯೂಸಿಯಂ ಅಥವಾ ಪಾರಂಪರಿಕ ವಸ್ತುಸಂಗ್ರಹಾಲಯ ಅಥವಾ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಬೇಕು ಎಂದು ಕಲಾವಿದ ಜನಾರ್ದನ ಹಾವಂಜೆ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು