Categories: ಪ್ರವಾಸ

ಬೆಂಕಿ ಉಗುಳೋ ಜಲಪಾತವಿದು: ವಿಶ್ವದ ಅತ್ಯಂತ ಅದ್ಬುತ ಫಾಲ್ಸ್

ಕ್ಯಾಲಿಫೋರ್ನಿಯಾ:  ಯೊಸೆಮೈಟ್ ಫೈರ್ಫಾಲ್ ಅದ್ಭುತವಾದ ನೈಸರ್ಗಿಕ ಜಲಧಾರೆಯಾಗಿದ್ದು, ಇದನ್ನ ಫೈರ್ ಫಾಲ್ ಅಂತಾನೂ ಕರೀತಾನೆ, ಯಾಕಂದ್ರೆ, ಈ ಜಲಪಾತದಿಂದ ನೀರು ಬೀಳುತ್ತಿದ್ದರೆ, ಅಗ್ನಿಯೇ ಹರಿದು ಬರುವಂತೆ ಕಾಣಿಸುತ್ತದೆ. ಈ ಜಲಪಾತ ಇದರ ವಿಶಿಷ್ಟತೆಯಿಂದಾಗಿಯೇ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತೆ.

ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನ ಲ್ಲಿ ಯೊಸೆಮೈಟ್ ಫೈರ್ ಫಾಲ್ ವೀಡಿಯೊವನ್ನು ಬಳಕೆದಾರರು ಪೋಸ್ಟ್ ಮಾಡಿದ್ದಾರೆ, ಅದರ ಶೀರ್ಷಿಕೆ ಹೀಗಿದೆ, ಯೊಸೆಮೈಟ್‌ನ ಹಾರ್ಸ್ಟೇಲ್ ಫಾಲ್ಸ್ ಬೆಂಕಿಯಂತೆ ಹೊಳೆಯುತ್ತದೆ. ಈ ಪರಿಣಾಮವನ್ನು ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ ಮಾತ್ರ ನೋಡಬಹುದು. ಈ ಜಲಪಾತ ಸೂರ್ಯಾಸ್ತದ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ಬೆಂಕಿಯೇ ಹರಿಯುವಂತೆ ಹರಿದು ಬರುತ್ತದೆ ಎಂದು ಬರೆದುಕೊಂಡಿದ್ದಾರೆ.

ಯೊಸೆಮೈಟ್ ಫೈರ್ ಫಾಲ್  ನ್ಯಾಚುರಲ್ ಆಪ್ಟಿಕಲ್ ಇಲ್ಯೂಶನ್ ಆಗಿದ್ದು, ಇದು ಸೂರ್ಯಾಸ್ತಮಾನದ ಕಿರಣಗಳು ಹಾರ್ಸ್ಟೇಲ್ ಜಲಪಾತದಿಂದ ಬೀಳುವ ತೊರೆಗಳಿಗೆ ಸರಿಯಾದ ಕೋನದಲ್ಲಿ ಪ್ರತಿಫಲಿಸಿದಾಗ, ಅಂದರೆ ಸೂರ್ಯನ ಕಿರಣಗಳು ಈ ಜಲಪಾತದ ನೀರಿನ ಮೇಲೆ ಬಿದ್ದಾಗ ಇದು ಸಂಭವಿಸುತ್ತದೆ.

ಸೂರ್ಯನ ಬೆಳಕು ನಿಖರವಾಗಿ ಜಲಪಾತದ ಮೇಲೆ ಬೀಳುತ್ತದೆ. ಇದರಿಂದ ಜಲಪಾತದ ನೀರಿನಲ್ಲಿ ಕೆಂಪು-ಕಿತ್ತಳೆ ಹೊಳಪನ್ನು ಉಂಟುಮಾಡುತ್ತದೆ, ಇದು ಜಲಪಾತಕ್ಕೆ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತದೆ ಎಂದು Sfgate.com ವರದಿ ಮಾಡಿದೆ. ಈ ಅದ್ಭುತ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.

ಯೊಸೆಮೈಟ್ ಫೈರ್ ಫಾಲ್ ನೋಡಲು ಉತ್ತಮ ಸಮಯವೆಂದರೆ ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ. ಈ ನೈಸರ್ಗಿಕ ವಿದ್ಯಮಾನವನ್ನು ಪ್ರತಿವರ್ಷ ಫೆಬ್ರವರಿ 10 ರಿಂದ 27 ರವರೆಗೆ ನೋಡಬಹುದು. ಸಂಜೆ 5:30 ರ ಸುಮಾರಿಗೆ ಸೂರ್ಯ ಮುಳುಗಿದಾಗ , ಅದರ ಬೆಳಕು ಜಲಪಾತಕ್ಕೆ ಅಪ್ಪಳಿಸುತ್ತದೆ. ಆ ಸಂದರ್ಭದಲ್ಲಿ, ಈ ಅದ್ಭುತ ನೋಟವನ್ನು ಕೇವಲ 3 ನಿಮಿಷಗಳ ಕಾಲ ನೋಡಲು ಸಿಗುತ್ತೆ, ಆದ್ದರಿಂದ ಜನರು ಅದನ್ನು ನೋಡಲು ಸಂಜೆ 4 ಗಂಟೆಯಿಂದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುತ್ತಾರೆ.

Ashitha S

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

4 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

4 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

4 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

5 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

5 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

5 hours ago