ಇದು ಒಂದೇ ಬಂಡೆಯಿಂದ ಕೆತ್ತಲ್ಪಟ್ಟ 1200 ವರ್ಷದ ಹಳೆಯ ದೇವಾಲಯ

ಮಹಾರಾಷ್ಟ್ರ: ಕರಕುಶಲ ದೇವಾಲಯಗಳಿಗೆ ಹೆಸರಾಗಿರುವ ಎಲ್ಲೊರ ದೇವಾಲಯಗಳಲ್ಲಿ ಇದು ಒಂದು. ವಿಷೇಶ ಏನೆಂದರೆ 1200 ವರ್ಷಗಳ ಹಳೆಯ ಈ ದೇವಾಲಯ ಒಂದು ಬಂಡೆಯಿಂದ ಇಡೀ ದೇವಾಲಯವನ್ನೇ ಕೆತ್ತಲಾಗಿದೆ.

16 ಗುಹೆ ಹೊಂದಿರುವ ಈ ದೇವಾಲಯ ವಿಶ್ವದ ಅತಿ ದೊಡ್ಡ ಏಕಶಿಲಾ ದೇವಾಲಯ. ಕೈಲಾಸನಾಥ ದೇವಾಲಯವಾದ ಇದು ಶಿವನಿಗೆ ಸಮರ್ಪಿತವಾದ ರಥಾಕಾರ ಸ್ಮಾರಕವನ್ನು ಹೊಂದಿದೆ. ಅಲ್ಲದೆ ಈ ದೇವಾಲಯವು 164 ಅಡಿ ಆಳ, 109 ಅಡಿ ಅಗಲ ಮತ್ತು 98 ಅಡಿ ಎತ್ತರ ಇರುವ ಒಂದೇ ಬಂಡೆಯಿಂದ ನಿರ್ಮಿಸಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರಾ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಕರೆಯಲ್ಪಡುವ ಈ ದೇಗುಲದ ಸಂಪೂರ್ಣ ಮಾಹಿತಿ ಹೀಗಿದೆ ನೋಡುವುದಾದರೇ. . ಇದು 100 ಕ್ಕೂ ಹೆಚ್ಚು ಗುಹೆಗಳ ನೆಲೆಯಾಗಿದ್ದು ಅದರಲ್ಲಿ 34 ಗುಹೆಗಳು ಸಾರ್ವಜನಿಕರಿಗೆ ಹೊಗಲು ಅವಕಾಶವಿದೆ. ಗುಹೆಯ ಸಂಕೀರ್ಣವನ್ನು ಚರಣಾಂದ್ರಿ ಬೆಟ್ಟಗಳ ಘನ ಬಂಡೆಗಳಿಂದ ಕತ್ತರಿಸಲಾಗಿದೆ.
ಅಲ್ಲದೆ ಎಲ್ಲೋರಾ ಸಂಕೀರ್ಣವು 12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳನ್ನು ಒಳಗೊಂಡಿದೆ. 1 ರಿಂದ 12 ರ ಗುಹೆಗಳು ಬೌದ್ಧ ಮಠಗಳು, ಚೈತರು ಮತ್ತು ವಿಹಾರಗಳು, 13 ರಿಂದ 29 ಗುಹೆಗಳು ಹಿಂದೂ ದೇವಾಲಯಗಳಾಗಿವೆ.

30 ರಿಂದ 34ರ ಗುಹೆಗಳು ಜೈನ ದೇವಾಲಯಗಳಾಗಿವೆ. ಎಲ್ಲೋರಾದಲ್ಲಿನ ಹಿಂದೂ ಮತ್ತು ಬೌದ್ಧ ಗುಹೆಗಳನ್ನು ರಾಷ್ಟ್ರಕೂಟ ರಾಜವಂಶದ (ಸಾ.ಶ. 753-982) ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು 1187 ರಿಂದ 1317 ರವರೆಗೆ ಆಳಿದ ಯಾದವ ರಾಜವಂಶವು ಹೆಚ್ಚಿನ ಜೈನ ಗುಹೆಗಳನ್ನು ನಿರ್ಮಿಸಿದರು ಎಂದು ಮೂಲಗಳು ತಿಳಿಸಿವೆ.

Ashitha S

Recent Posts

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

20 mins ago

ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಶಾಸಕ ಎ.ಮಂಜುಗೆ ಕೊಟ್ಟಿದ್ದೆ: ನವೀನ್ ಗೌಡ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್ ಗೌಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪೋಸ್ಟ್ ಭಾರೀ…

36 mins ago

ಡಿಫರೆಂಟ್ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟ ನಟ ಮಿತ್ರ

ಕನ್ನಡದ ಹಾಸ್ಯನಟ ಮಿತ್ರ ಇದೀಗ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

1 hour ago

ಶೀಘ್ರದಲ್ಲೇ ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ಆರಂಭ

ಲೋಕಸಭೆ ಚುನಾವಣೆ ಮುಗಿದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕೊಚ್ಚಿಯ ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಲಿದೆ.

2 hours ago

ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಅಂಗವಾಗಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದ…

2 hours ago

ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ; ಶಾಸಕರ ಭೇಟಿ, ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ…

2 hours ago