News Karnataka Kannada
Sunday, April 28 2024
ಪ್ರವಾಸ

ಬೆಂಕಿ ಉಗುಳೋ ಜಲಪಾತವಿದು: ವಿಶ್ವದ ಅತ್ಯಂತ ಅದ್ಬುತ ಫಾಲ್ಸ್

ಯೊಸೆಮೈಟ್ ಫೈರ್ಫಾಲ್ ಅದ್ಭುತವಾದ ನೈಸರ್ಗಿಕ ಜಲಧಾರೆಯಾಗಿದ್ದು, ಇದನ್ನ ಫೈರ್ ಫಾಲ್ ಅಂತಾನೂ ಕರೀತಾನೆ, ಯಾಕಂದ್ರೆ, ಈ ಜಲಪಾತದಿಂದ ನೀರು ಬೀಳುತ್ತಿದ್ದರೆ, ಅಗ್ನಿಯೇ ಹರಿದು ಬರುವಂತೆ ಕಾಣಿಸುತ್ತದೆ. ಈ ಜಲಪಾತ ಇದರ ವಿಶಿಷ್ಟತೆಯಿಂದಾಗಿಯೇ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತೆ.
Photo Credit : News Kannada

ಕ್ಯಾಲಿಫೋರ್ನಿಯಾ:  ಯೊಸೆಮೈಟ್ ಫೈರ್ಫಾಲ್ ಅದ್ಭುತವಾದ ನೈಸರ್ಗಿಕ ಜಲಧಾರೆಯಾಗಿದ್ದು, ಇದನ್ನ ಫೈರ್ ಫಾಲ್ ಅಂತಾನೂ ಕರೀತಾನೆ, ಯಾಕಂದ್ರೆ, ಈ ಜಲಪಾತದಿಂದ ನೀರು ಬೀಳುತ್ತಿದ್ದರೆ, ಅಗ್ನಿಯೇ ಹರಿದು ಬರುವಂತೆ ಕಾಣಿಸುತ್ತದೆ. ಈ ಜಲಪಾತ ಇದರ ವಿಶಿಷ್ಟತೆಯಿಂದಾಗಿಯೇ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತೆ.

ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನ ಲ್ಲಿ ಯೊಸೆಮೈಟ್ ಫೈರ್ ಫಾಲ್ ವೀಡಿಯೊವನ್ನು ಬಳಕೆದಾರರು ಪೋಸ್ಟ್ ಮಾಡಿದ್ದಾರೆ, ಅದರ ಶೀರ್ಷಿಕೆ ಹೀಗಿದೆ, ಯೊಸೆಮೈಟ್‌ನ ಹಾರ್ಸ್ಟೇಲ್ ಫಾಲ್ಸ್ ಬೆಂಕಿಯಂತೆ ಹೊಳೆಯುತ್ತದೆ. ಈ ಪರಿಣಾಮವನ್ನು ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ ಮಾತ್ರ ನೋಡಬಹುದು. ಈ ಜಲಪಾತ ಸೂರ್ಯಾಸ್ತದ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ಬೆಂಕಿಯೇ ಹರಿಯುವಂತೆ ಹರಿದು ಬರುತ್ತದೆ ಎಂದು ಬರೆದುಕೊಂಡಿದ್ದಾರೆ.

ಯೊಸೆಮೈಟ್ ಫೈರ್ ಫಾಲ್  ನ್ಯಾಚುರಲ್ ಆಪ್ಟಿಕಲ್ ಇಲ್ಯೂಶನ್ ಆಗಿದ್ದು, ಇದು ಸೂರ್ಯಾಸ್ತಮಾನದ ಕಿರಣಗಳು ಹಾರ್ಸ್ಟೇಲ್ ಜಲಪಾತದಿಂದ ಬೀಳುವ ತೊರೆಗಳಿಗೆ ಸರಿಯಾದ ಕೋನದಲ್ಲಿ ಪ್ರತಿಫಲಿಸಿದಾಗ, ಅಂದರೆ ಸೂರ್ಯನ ಕಿರಣಗಳು ಈ ಜಲಪಾತದ ನೀರಿನ ಮೇಲೆ ಬಿದ್ದಾಗ ಇದು ಸಂಭವಿಸುತ್ತದೆ.

ಸೂರ್ಯನ ಬೆಳಕು ನಿಖರವಾಗಿ ಜಲಪಾತದ ಮೇಲೆ ಬೀಳುತ್ತದೆ. ಇದರಿಂದ ಜಲಪಾತದ ನೀರಿನಲ್ಲಿ ಕೆಂಪು-ಕಿತ್ತಳೆ ಹೊಳಪನ್ನು ಉಂಟುಮಾಡುತ್ತದೆ, ಇದು ಜಲಪಾತಕ್ಕೆ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತದೆ ಎಂದು Sfgate.com ವರದಿ ಮಾಡಿದೆ. ಈ ಅದ್ಭುತ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.

ಯೊಸೆಮೈಟ್ ಫೈರ್ ಫಾಲ್ ನೋಡಲು ಉತ್ತಮ ಸಮಯವೆಂದರೆ ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ. ಈ ನೈಸರ್ಗಿಕ ವಿದ್ಯಮಾನವನ್ನು ಪ್ರತಿವರ್ಷ ಫೆಬ್ರವರಿ 10 ರಿಂದ 27 ರವರೆಗೆ ನೋಡಬಹುದು. ಸಂಜೆ 5:30 ರ ಸುಮಾರಿಗೆ ಸೂರ್ಯ ಮುಳುಗಿದಾಗ , ಅದರ ಬೆಳಕು ಜಲಪಾತಕ್ಕೆ ಅಪ್ಪಳಿಸುತ್ತದೆ. ಆ ಸಂದರ್ಭದಲ್ಲಿ, ಈ ಅದ್ಭುತ ನೋಟವನ್ನು ಕೇವಲ 3 ನಿಮಿಷಗಳ ಕಾಲ ನೋಡಲು ಸಿಗುತ್ತೆ, ಆದ್ದರಿಂದ ಜನರು ಅದನ್ನು ನೋಡಲು ಸಂಜೆ 4 ಗಂಟೆಯಿಂದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು