News Karnataka Kannada
Saturday, May 04 2024
ವಿಶೇಷ

ಕರ್ನಾಟಕ ಐತಿಹಾಸಿಕ ತೀರ್ಥಕ್ಷೇತ್ರ – ಹಾಸನ

Karnataka Historical Pilgrimage – Hassan
Photo Credit : By Author

ಹಾಸನ ಜಿಲ್ಲೆಯು ಭಾರತದಲ್ಲಿ ಕರ್ನಾಟಕ ರಾಜ್ಯದ ೩೦ ಜಿಲ್ಲೆಗಳ ಪೈಕಿ ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಒಂದು ಜಿಲ್ಲೆ. ಜಿಲ್ಲೆಯು ಶ್ರೀಮಂತ ಇತಿಹಾಸದಿಂದ ಹಾಗೂ ಸ್ಮರಣೀಯ ಘಟನೆಗಳಿಂದ ಕೂಡಿದೆ.

ರಾಮನಾಥಪುರ:
ರಾಮನಾಥಪುರವು ಅರಕಲಗೂಡು ತಾಲ್ಲೂಕಿಗೆ ಸೇರಿದ್ದು. ಅಲ್ಲಿಂದ ೧೯ ಕಿ.ಮೀ.ಗಳ ದೂರದಲ್ಲಿ ಕಾವೇರಿ ನದಿ ತೀರದ ಬಹುದೊಡ್ಡ ತೀರ್ಥಕ್ಷೇತ್ರವಾಗಿದೆ. ಅದು ರಾಮೇಶ್ವರ ಸ್ವಾಮಿ, ಅಗಸ್ತೇಶ್ವರ ಸ್ವಾಮಿ, ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ, ಪಟ್ಟಾಭಿ ರಾಮಸ್ವಾಮಿ ಮೊದಲಾದ ಹಲವು ದೇವಸನ್ನಿಧಿಗಳ ಬೀಡಾಗಿದೆ. ಶುಕ್ರಾಚಾರ್ಯರು ಇಲ್ಲಿಯೇ ತಪಸ್ಸು ಮಾಡಿ ಅಮೃತಸಂಜೀವಿನಿ ಮಂತ್ರವನ್ನು ಸಿದ್ಧಿಸಿಕೊಂಡರು.

ಶ್ರೀರಾಮನು ರಾವಣವಧೆಯ ಪಾಪನಿವಾರಣೆಗಾಗಿ ಈ ಕ್ಷೇತ್ರಕ್ಕೆ ಬಂದು ರಾಮಲಿಂಗೇಶ್ವರ ಲಿಂಗವನ್ನು ಸ್ಥಾಪಿಸಿ ಪೂಜಿಸಿದನು. ಪಟ್ಟ ಣಕ್ಕೆ ರಾಮನಾಥಪುರ ಎಂದು ಹೆಸರಾಗಲು ಅದೇ ಕಾರಣವಾ ಯಿತು. ಅಲ್ಲಿ ದೇವಿಯ ಸನ್ನಿಧಿ ಇರಲಿಲ್ಲ . ಶಂಕರಾಚಾರ್ಯರು ಆಗಮಿಸಿ ಇಂದ್ರಾಕ್ಷಮ್ಮದೇವಿಯನ್ನು ಪ್ರತಿಷ್ಠಾಪಿಸಿ ಆಕೆಯ ಎದು ರಿಗೆ ಶ್ರೀಚಕ್ರವನ್ನೂ ನೆಲೆಗೊಳಿಸಿದ್ದಾರೆ. ಅಗ ಮುನಿಗಳಿಂದ ಸ್ಥಾಪನೆ ಗೊಂಡ ಅಗಸ್ತೇಶ್ವರ ದೇವಾಲಯದಲ್ಲಿ ಅಗಣ್ಯರ ಪತ್ನಿ ಲೋಪಾ ಮುದ್ರೆಯ ಸನ್ನಿಧಾನವು ವಿಶೇಷವಾಗಿದೆ. ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಯು ಸರ್ವರೂಪನಾಗಿ ಅಲ್ಲಿ ನೆಲೆಯಾಗಿದ್ದಾನೆ. ಅವನಿಗಾಗಿ ನಡೆಯುವ ತೇರು, ದನಗಳ ಜಾತ್ರೆ ಅತ್ಯಂತ ದೊಡ್ಡದು. ಸಂತರ್ಪಣೆಯ ಕಾಲದಲ್ಲಿ ಹರಕೆ ಹೊತ್ತವರು ಎಂಜಲುಎಲೆಗಳ ಮೇಲೆ ಉರುಳು ಸೇವೆ ಮಾಡುವ ‘ಮಡೆ ಹೊರಳುವುದು’ ಎಂಬ ವಿಶಿಷ್ಟ ಆಚರಣೆ ಇಲ್ಲಿ ನಡೆಯುತ್ತದೆ. ಲಕ್ಷ್ಮೀನರಸಿಂಹಸ್ವಾಮಿಯ ದೇವಾ ಲಯದಲ್ಲಿ ತೊಡೆಯ ಮೇಲೆ ಕೂರಿಸಿಕೊಂಡು ಆಸೀನ ನಾಗಿರುವ ಸ್ವಾಮಿಯ ಮೂರ್ತಿಯು ಮನೋಹಾರಿಯಾಗಿದೆ. ಪಟ್ಟಾಭಿರಾಮನನ್ನು ಸೌಭರಿಮುನಿಗಳು ಸ್ಥಾಪಿಸಿ ಪೂಜಿಸಿದ್ದಾರೆ. ಆ ಪಟ್ಟಾಭಿರಾಮ ದೇವಾಲಯದಲ್ಲಿ ರಾಮಪಂಚಾಯತನವೆನ್ನುವ ರಾಮ-ಸೀತಾ-ಲಕ್ಷಣ-ಭರತ- ಶತ್ರುಘ್ನರೆಲ್ಲರೂ ಒಟ್ಟಿಗೆ ಇದ್ದಾರೆ. ಹನುಮಂತನೂ ಇದ್ದಾನೆಂದು ಹೇಳಬೇಕಾಗಿಯೇ ಇಲ್ಲ, ಸೀತಾ ದೇವಿಯು ಶ್ರೀರಾಮನ ತೊಡೆಯ ಮೇಲೆ ಕುಳಿತ ರೂಪದಲ್ಲಿರು ವುದು ಅಲ್ಲಿನ ವಿಶೇಷ.

ಪಟ್ಟಾಭಿರಾಮ ದೇವಾಲಯಕ್ಕೆ ಶ್ರೀವೈಷ್ಣವರು ಅರ್ಚಕರು, ವಾರ್ಷಿಕವಾಗಿ ನಡೆಯುವ ರಾಮಾನುಜಾಚಾರ್ಯರ ಸ್ವಾಧಿಯ ತಿರುನಕತ್ರವು ಅತ್ಯಂತ ವರ್ಣಮಯವಾಗಿ ಸಂಪನ್ನ ಗೊಳ್ಳುತ್ತದೆ. ಅಲ್ಲಿಂದ ೨೦ ಕಿ.ಮೀ. ದೂರದಲ್ಲಿರುವ ಮೈಸೂರು ಜಿಲ್ಲೆಯ ಸಾಲಿಗ್ರಾಮದ ‘ಶ್ರೀಪಾದತೀರ್ಥ’ವೆಂಬ ರಾಮಾನುಜರ ಪಾದಸ್ಪರ್ಶದಿಂದ ಪವಿತ್ರಗೊಂಡ ಕಲ್ಯಾಣಿಯಿಂದ ಅಭಿಷೇಕಕ್ಕಾಗಿ ಪುಣ್ಯತೀರ್ಥವನ್ನು ಕೊಡದಲ್ಲಿ ಹೊತ್ತು ಪಾದಯಾತ್ರೆಯಲ್ಲಿಯೇ ತಂದು, ಆ ದಿನ ಊರಿನೊಳಗೆ ಮೆರವಣಿಗೆ ಮಾಡುತ್ತಾರೆಂಬುದು ಒಂದು ವೈಶಿಷ್ಟ್ಯವೇ ಸರಿ. ಒಬ್ಬರ ತಪ್ಪ ಒಬ್ಬರಂತೆ ಇಬ್ಬರು ಆ ಕುಂಭ ವನ್ನು ಹೊತ್ತು ತರುತ್ತಾರೆ. ರಾತ್ರಿಯಲ್ಲಿ ನಡೆಯುವ ಉತ್ಸವಕಾಲ ದಲ್ಲಿ ‘ಭಜ ಯತಿರಾಜರ’ ಎಂದು ಹಾಡಿಕೊಂಡು ಎರಡು ಗುಂಪಾಗಿ, ಎದುರು ಬದುರಾಗಿ ನಿಂತು ಸಲ್ಲಿಸುವ ನರ್ತನಸೇವೆ ಅತ್ಯಂತ ರಮ ಣೀಯವಾಗಿರುತ್ತದೆ.

ಕಾವೇರಿ ನದಿಯೊಳಗೆ ವಹಿಪುಷ್ಕರಿಣಿ, ಗಾಯತ್ರಿಶಿಲೆ, ಮೇನಕಾ ಗೋಗರ್ಭ ಎಂಬ ಪುಣ್ಯತಾಣಗಳಿವೆ. ಗೋಗರ್ಭವು ಗೋವಿನ ಹೊಟ್ಟೆಯಂತೆ ಇರುವ ನೀರು ತುಂಬಿ ಹರಿಯುವ ಒಂದು ಚಿಕ್ಕಗಡಿ, ನದಿಯ ಪ್ರವಾಹ ಕಡಿಮೆಯಿದ್ದಾಗ ಭಕ್ತರು ಉಸಿರು ಬಿಗಿಹಿಡಿದು ಆ ಗೋಗರ್ಭದ ಮೂಲಕ ತೂರಿ ಹೊರಕ್ಕೆ ಬರುತ್ತಾರೆ. ಅದು ಸಕಲಪಾಪಗಳನ್ನೂ ಪರಿಹರಿಸುತ್ತದೆ.

ಬೇಲೂರು:
ತಾಲ್ಲೂಕು ಕೇಂದ್ರವಾಗಿರುವ ಬೇಲೂರು, ವೇಲಾ ಪುರಿಯೆಂದೂ ಕರೆಯಲ್ಪಟ್ಟು ಯಗಚಿ ಎಂಬ ನದಿಯ ದಂಡೆಯ ಲ್ಲಿದೆ. ಅಲ್ಲಿರುವ ಚೆನ್ನಕೇಶವ ದೇವಾಲಯವು ಆ ಸ್ವಾಮಿಯ ಅಪೂರ್ವ ವಾದ ಮೂರ್ತಿಯಿಂದಲೂ ಮಿಕ್ಕ ಮೂರ್ತಿಗಳ ಶಿಲ್ಪಕಲಾಪ್ರೌಢಿಮೆ ಯಿಂದಲೂ ಜಗದ್ವಿಖ್ಯಾತವಾಗಿದೆ. ಜಕಣಾಚಾರಿಯೆಂಬ ಮಹಾ ಶಿಲ್ಪಿಯ ಹೆಸರು ಆ ದೇವಾಲಯ ನಿರ್ಮಾಣದ ಹಿನ್ನೆಲೆಯಲ್ಲಿದೆ. ”ನಾನು ದೈವೀ ಸ್ಪೂರ್ತಿಯಿಂದ ಈ ದೇವಾಲಯ ನಿರ್ಮಿಸಿದ್ದೇನೆ. ಇಂತಹ ಇನ್ನೊಂದು ದೇವಾಲಯವನ್ನು ಪುನಃ ನಿರ್ಮಿಸಲು ನನ್ನಿಂದ ಸಾದ್ಯವಿಲ್ಲ’ ಎಂದು ಶಿಲ್ಪಿಯು ಹೇಳಿದನೆಂದು ಮಾತು ದಾಖಲಾಗಿದೆ. ಆ ದೇವಾಲಯದ ಶಿಲ್ಪಮಾಧುರ್ಯದಿಂದ ಮೋಹಿತರಾಗಿ ಡಿ.ವಿ.ಜಿ. ಅವರು ‘ಅಂತಃಪುರಗಿತೆ’ ಎಂಬ ಗೀತ ಗುಚ್ಛವನ್ನು ರಚಿಸಿದ್ದಾರೆ.

ಶ್ರವಣಬೆಳಗೊಳ:
ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದ ಶ್ರವಣಬೆಳಗೊಳವು ಭರತಖಂಡದ ಅತ್ಯಂತ ಶ್ರೇಷ್ಠವಾದ ಜೈನ ತೀರ್ಥವಾಗಿದೆ. ಇಂದ್ರಗಿರಿ ಎಂಬ ಬೆಟ್ಟದ ಮೇಲೆ ೫೮ ಅಡಿ ಎತ್ತರದ ಗೊಮ್ಮಟೇಶ್ವರ ಮೂರ್ತಿಯು ಭುವನಮೋಹನ ಶಿಲ್ಪವಾಗಿದೆ. ಬೆಟ್ಟದ ತುದಿಯ ಒಂದು ಕೋಡುಗಲ್ಲನ್ನು, ಅದು ಇದ್ದ ತಾಣ ದಲ್ಲಿಯೇ ಗೊಮ್ಮಟಮೂರ್ತಿಯನ್ನಾಗಿ ರೂಪಿಸಿರುವ ಕೌಶಲವು ನಮ್ಮನ್ನು ಭ್ರಾಂತಗೊಳಿಸುತ್ತದ. ಬೆಟ್ಟದ ತಪ್ಪಲಿನಲ್ಲಿ ಅತ್ಯಂತ ವಿಶಾಲ ವಾದ ಸರೋವರವೊಂದಿದೆ. ಅಲ್ಲಿಯೇ ಇರುವ ಚಂದ್ರಗಿರಿ ಎಂಬ ಇನ್ನೊಂದು ಬೆಟ್ಟದ ಮೇಲೆ ಮತ್ತು ಊರಿನ ವಿವಿಧ ಭಾಗಗಳಲ್ಲಿ ಅನೇಕ ತೀರ್ಥಂಕರ ಬಸದಿಗಳಿವೆ. ಭಟ್ಟಾರಕ ಪರಂಪರೆಯ ಒಂದು ಜೈನಮಠವೂ ಇದೆ. ೧೨ ವರ್ಷಗಳಿಗೊಮ್ಮೆ ಗೊಮ್ಮಟನಿಗೆ ನೆರ ವೇರುವ ‘ಮಹಾಮಸ್ತಕಾಭಿಷೇಕ’ಕ್ಕೆ ವಿಶ್ವದ ವಿವಿಧಡೆಗಳಿಂದ ಲಕ್ಷಾಂ ತರ ಭಕ್ತರು ಬರುತ್ತಾರೆ.

ಹಾಸನಾಂಬ ದೇವಾಲಯ :
ಇಲ್ಲಿನ ರಾಜಗೋಪುರವನ್ನು ಹೊಸದಾಗಿ ನರ್ಮಾಣಮಾಡಲಾಗಿದೆ. ಈ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನರ್ಮಿಸಲಾಗಿದೆ. ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇವಾಲಯಗಳಿವೆ ಅವುಗಳೆಂದರೆ ರ್ಬಾರ್ ಗಣಪತಿ ದೇವಾಲಯ, ಹಾಸನಾಂಭ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ ೩ ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ. ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು ಅದು ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಹಿಂದೆ ಸುಮಾರು ೧೨ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕಿತು ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂತಲೂ ಹೇಳುತ್ತಾರೆ. ಇಲ್ಲಿ ದೀಪಾವಳಿಯ ಸಂರ್ಭದಲ್ಲಿ ೧೨ ದಿನಗಳಕಾಲ ಮಾತ್ರ ದೇವಾಲಯವನ್ನು ತೆರೆಯಲಾಗುತ್ತದೆ. ಇಲ್ಲಿನ ದೇವಾಲಯವನ್ನು ತೆರೆಯಬೇಕಾದರೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಇಲ್ಲಿನ ವಿಷೇಶತೆಯೆಂದರೆ ಇಲ್ಲಿ ಈ ಬಾರಿ ಹಚ್ಚಿದ ದೀಪ ಮುಂದಿನ ರ್ಷದವರೆಗೂ ಬೆಳಗುತ್ತಿರುತ್ತದೆ ಹಾಗೂ ಹೂವುಗಳೂ ಕೂಡ ತಾಜಾವಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು