News Karnataka Kannada
Monday, April 29 2024
ಪರಿಸರ

ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದು ವೆನಿಲ್ಲಾ

Guidance for vanilla crop cultivation
Photo Credit : Pixabay

ಆರ್ಕಿಡೆಸಿ ಕುಟುಂಬಕ್ಕೆ ಸೇರಿದ ವೆನಿಲ್ಲಾ, ಕೇಸರಿಯ ನಂತರ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಇವು 40ಕ್ಕೂ ಹೆಚ್ಚು ಜಾತಿಗಳಲ್ಲಿ ಬೆಳೆಯಲಾಗುತ್ತದೆ. ಮುಖ್ಯವಾಗಿ ವೆನಿಲ್ಲಾ ಪ್ಲಾನಿಫೋಲಿಯಾ ಆಂಡ್ರಿವ್ಸ್ ಎಂಬ ಜಾತಿಯ ವೆನಿಲ್ಲಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮಡಗಾಸ್ಕರ್ ವಿಶ್ವದ ಅತ್ಯಂತ ಹೆಚ್ಚು ವೆನಿಲ್ಲಾ ಉತ್ಪಾದಿಸುವ ಪ್ರದೇಶವಾಗಿದೆ.

ಇಳುವರಿ: ವೆನಿಲ್ಲಾ ಗಿಡಗಳನ್ನು ನೆಟ್ಟು3 ವರ್ಷಗಳ ನಂತರ ಮೊದಲ ಇಳುವರಿಯನ್ನು ಪ್ರಾರಂಭಿಸುತ್ತದೆ. ಮತ್ತು 12 ರಿಂದ 14 ವರ್ಷಗಳವರೆಗೆ ಇಳುವರಿಯನ್ನು ನೀಡುತ್ತವೆ. ಸಾಮಾನ್ಯವಾಗಿ ವೆನಿಲ್ಲಾ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯಲಾಗುತ್ತದೆ. ಮುಖ್ಯವಾಗಿ ತೆಂಗಿನಕಾಯಿ ಹಾಗೂ ಅಡಿಕೆಯ ಮಧ್ಯೆ ವೆನಿಲ್ಲಾ ಗಿಡವನ್ನು ಬೆಳೆಯಲಾಗುತ್ತದೆ. ಪ್ರಪಂಚದ ವೆನಿಲ್ಲಾ ರಫ್ತಿನ ಸುಮಾರು 2 ಶೇಕಡಾ ದಷ್ಟಿದೆ. ಭಾರತದಲ್ಲಿ ಕರ್ನಾಟಕವು ದೇಶದ ವೆನಿಲ್ಲಾ ಕೃಷಿ ಅಗ್ರಸ್ಥಾನದಲ್ಲಿದೆ.  ಇತರ ಮಸಾಲೆಗಳಿಗೆ ಹೋಲಿಸಿದರೆ ವೆನಿಲ್ಲಾ ಕೃಷಿಗೆ ಆರಂಭಿಕ ಹೋಡಿಕೆ ಕಡಿಮೆ.

ವಾತಾವರಣ: ವೆನಿಲ್ಲಾ ಉಷ್ಣವಲಯದ ಆರ್ಕಿಡ್ ಬೆಳೆಯಾಗಿದ್ದು ಹೆಚ್ಚಿನ ಆರ್ದ್ರತೆ, ನೆರಳು ಮತ್ತು ಮಧ್ಯಮ ತಾಪಮಾನದ ಅಗ್ಯವಿರುತ್ತದೆ.
ಭಾರತದಲ್ಲಿ ಸ್ವಾಭಾವಿಕ ಸ್ವ ಪಾರಾಗ ಸ್ಪರ್ಶವು ಸಾಧ್ಯವಿಲ್ಲದ ಕಾರಣ ಫಲೀಕರಣ ಮತ್ತು ಹಣ್ಣುಗಳನ್ನು ಹೊಂದಿಸಲು ಕೃತಕ ಪರಾಗಸ್ಪರ್ಶವನ್ನು ನಡೆಸಲಾಗುತ್ತದೆ.

ವೆನಿಲ್ಲಾ ಬೆಳೆಗೆ 25 ಡಿಗ್ರಿ ಯಿಂದ 34 ಡಿಗ್ರಿಯವರೆಗೆ ತಾಪಮಾನದ ವ್ಯಾಪ್ತಿಯು ಉತ್ತಮವಾಗಿದೆ. ಸಡಿಲವಾದ ಮತ್ತು ಪೈಬರ್ ಮಣ್ಣಿನಲ್ಲಿ ಚನ್ನಾಗಿ ಬೆಳೆಯುತ್ತದೆ. ಅದಾಗಿಯೂ ಉತ್ತಮ ಇಳುವರಿಗಾಗಿ ಮಣ್ಣಿನಲ್ಲಿ ಹೆಚ್ಚಿನ ಸಾವಯವ ಪದಾರ್ಥಗಳ ಅಗತ್ಯವಿರುತ್ತದೆ. ಭಾರತದಲ್ಲಿ ಮಶ್ಚಿಮ ಘಟ್ಟದ ಮಣ್ಣು ವೆನಿಲ್ಲಾ ಕೃಷಿಗೆ ಸೂಕ್ತವಾಗಿದೆ. ಏಕೆಂದರೆ ಈ ಮಣ್ಣು ಸಾವಯವ ಪದಾರ್ಥಗಳಿಂದ ಸಮೃದ್ಧವಾಗಿರುತ್ತದೆ.

ವೆನಿಲ್ಲಾದಿಂದ ಆರೋಗ್ಯ ಪ್ರಯೋಜನಗಳು:

• ವೆನಿಲ್ಲಾ ಸಾರವು ಸುಟ್ಟ ಗಾಯಗಳು, ಮತ್ತು ಜಂತುಗಳ ಕಡಿತಗಳನ್ನು ಗುಣಪಡಿಸಲು ಸಹಾಯಕವಾಗಿದೆ
• ಮೊಡವೆಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ.
• ವೆನಿಲ್ಲಾ ಸಾರವು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
• ವೆನಿಲ್ಲಾ ಸಾರವು ತೂಕ ನಷ್ಟಕ್ಕೆ ಸಹಾಯಕವಾಗಿದೆ.
• ಇದು ಹಲ್ಲಿನ ಆರೋಗ್ಯಕ್ಕೂ ಉತ್ತಮ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು