News Karnataka Kannada
Sunday, April 28 2024
ನುಡಿಚಿತ್ರ

ಒಡಹುಟ್ಟಿದವರನ್ನು ನೆನೆಯುವ ಶುಭದಿನ ರಕ್ಷಾಬಂಧನ

Teachers remove rakhi from children's hands, throw them in dustbin
Photo Credit : Pixabay

ರಕ್ಷಾ ಬಂಧನ ಹಿಂದೂ ಸಂಸ್ಕೃತಿಯಲ್ಲಿ ಆಚರಿಸಲಾಗುವ ಹಬ್ಬ. ಈ ದಿನದಂದು ಎಲ್ಲಾ ಸೋದರಿಯರು ತಮ್ಮ ನೆಚ್ಚಿನ ಅಣ್ಣನಿಗೆ ರಾಖಿಯನ್ನು ಕಟ್ಟಿ ತನ್ನ ಪ್ರೀತಿಯ ಸೋದರಿಗೆ ಶ್ರೀರಕ್ಷೆಯಾಗಿರುವಂತೆ ಕೇಳಿಕೊಳ್ಳುತ್ತಾಳೆ. ಇದಕ್ಕೆ ಪ್ರತಿಯಾಗಿ ಅಣ್ಣನಿಂದ ಉಡುಗೊರೆಗಳನ್ನು, ಸಿಹಿತಿಂಡಿಗಳನ್ನು ಪಡೆದುಕೊಳ್ಳುತ್ತಾಳೆ.

ಈ ರಕ್ಷಾ ಬಂಧನವು ಶ್ರಾವಣ ಮಾಸದ ಕೊನೆಯ ದಿನದಂದು ಆಚರಿಸುತ್ತಾರೆ.ಈ ಹಬ್ಬಕ್ಕೆ ಹಿಂದೂ ಪುರಾಣಗಳಲ್ಲಿಯೂ ಇತಿಹಾಸವಿದೆ. ಮಹಾಭಾರತದಲ್ಲಿ ಒಮ್ಮೆ ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರದಿಂದ ತನ್ನ ಕೈಗೆ ಗಾಯ ಮಾಡಿಕೊಂಡು ಕೈಯಿಂದ ರಕ್ತ ಸುರಿಸುವುದನ್ನು ಗಮನಿಸಿದ ರಾಜಕುಮಾರಿ ದ್ರೌಪದಿಯು ತನ್ನ ಸೀರೆಯ ಒಂದು ತುಂಡನ್ನು ಹರಿದು ಶ್ರೀಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣನು ರಾಜಕುಮಾರಿ ದ್ರೌಪದಿಯನ್ನು ಪ್ರಪಂಚದ ಎಲ್ಲಾ ದುಷ್ಟರಿಂದ ರಕ್ಷಿಸುವುದಾಗಿ ಅವಳಿಗೆ ಭರವಸೆ ನೀಡುತ್ತಾನೆ.

ಇಲ್ಲಿಂದ ಮುಂದೆ ರಾಜಕುಮಾರಿ ದ್ರೌಪದಿಯನ್ನು ಪ್ರತಿ ಹೆಜ್ಜೆಯಲ್ಲು ಕಾಪಾಡುತ್ತಾನೆ. ಆಕೆಯನ್ನು ಎಲ್ಲಾ ಅಪಮಾನ ಅವಮಾನಗಳಿಂದ ರಕ್ಷಿಸುತ್ತಾನೆ. ಹಲವು ಕಡೆ ಶ್ರೀಕೃಷ್ಣ ಹಾಗೂ ದ್ರೌಪದಿಯ ಸಂಬಂಧವನ್ನು ಉತ್ತಮ ಸ್ನೇಹಿತರಾಗಿಯೂ ಹಾಗೂ ಅಣ್ಣ ತಂಗಿಯಾಗಿಯೂ ಉದಾಹರಿಸುತ್ತಾರೆ.

ಈಗ ಬದಲಾಗುತ್ತಿರುವ ಸಮಾಜದೊಂದಿಗೆ ಆಚರಣೆಗಳ ವಿಧಾನವು ಬದಲಾಗುತ್ತಿದೆ. ಕೇವಲ ತಂಗಿ ಅಣ್ಣನಿಗೆ ಮಾತ್ರ ರಾಖಿ ಕಟ್ಟದೆ, ಸ್ನೇಹಿತನಿಗೂ ಕಟ್ಟುವ ಪರಿಪಾಠ ಈಗ ರೂಢಿಯಾಗಿದೆ.

ವಿವಿಧತೆಯಲ್ಲಿ ಏಕತೆ ಇರುವ ನಮ್ಮ ದೇಶದಲ್ಲಿ ಈ ರಕ್ಷಾಬಂಧನವನ್ನು ಹಲವು ಭಾಗಗಳಲ್ಲಿ ಹಲವು ಹೆಸರುಗಳಿಂದ ಕರೆಯುತ್ತಾರೆ. ಭಾರತದ ವಾಯುವ್ಯ ಪ್ರದೇಶದಲ್ಲಿ ರಾಖಿ ಪೂರ್ಣಿಮ ಎಂಬ ಹೆಸರಿನಿಂದಲೂ, ಕರಾವಳಿ ಪ್ರದೇಶದ ಪಶ್ಚಿಮ ಘಟ್ಟಗಳಲ್ಲಿ ನಾರಿಯಲ್ ಪೂರ್ಣಿಮ, ಒಡಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲಿ
ಅವನಿ ಅವಿಟ್ಟಂ, ದೇಶದ ಮಧ್ಯ ಭಾಗವಾದ ಮಧ್ಯಪ್ರದೇಶ, ಛತ್ತಿಸ್ಘಡ್, ಹಾಘೂ ಉತ್ತರ ಪ್ರದೇಶದ ರಾಜ್ಯಗಳಲ್ಲಿ ಕಜರಿ ಪೂರ್ಣಿಮ ಎಂದೂ, ಗುಜರಾತ್‍ನಲ್ಲಿ ಪವಿತ್ರೂಪನ ಎಂದೂ ಕರೆಯುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು