News Karnataka Kannada
Thursday, May 02 2024
ವಿಶೇಷ

ವಿದ್ಯಾರ್ಥಿಗಳ ಉತ್ಸಾಹದ ಚಿಲುಮೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ

A fountain of enthusiasm for the students, Dr. A.P.J. Abdul Kalam
Photo Credit : Wikipedia

ಸದಾ ಮಕ್ಕಳೊಂದಿಗೆ ವಿದ್ಯಾರ್ಥಿಗಳೊಂದಿಗೆ ಉತ್ಸುಕರಾಗಿ ಅವರು ಕೇಳುವ ಪ್ರಶ್ನೆಗಳಿಗೆ ಮಕ್ಕಳಿಕೆ ಅರ್ಥವಾಗುವಂತೆ ಉತ್ತರ ನೀಡಿ ಮಕ್ಕಳನ್ನು ಖುಷಿಪಡಿಸುವ ಮನಸ್ಸು ಇರುವವರು ಡಾ. ಎ.ಪಿ.ಜೆ ಅಬ್ದುಲ್ ಕಲಾಂ. ಇವರು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆ ದಾರಿ ದೀಪ. ಇವರ ಮಾರ್ಗದರ್ಶನ, ತತ್ವಾದರ್ಶಗಳು ಇಡೀ ದೇಶಕ್ಕೆ ಮಾದರಿ.

ನಾವು ಯುವಜನರು ಅವರ ಆದರ್ಶಗಳನ್ನು ಪಾಲಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗೆಳನ್ನು ನೀಡಬೇಕು ಎನ್ನವುದೇ ನಮಗೆ ಸ್ಫೂರ್ತಿ. ಅವರಲ್ಲಿದ್ದ ಒಂದು ಆಸ್ತಿ ಎಂದರೆ ಅದು ಪುಸ್ತಕಳು ಇದು ಬಿಟ್ಟರೆ ಬೇರೆ ಯಾವ ವಸ್ತುಗಳು ಅವರಲಿಲ್ಲ ಅವರ ಸರಳ ಸಜ್ಜನಿಕೆ ಸಾಬೀತು ಪಡಿಸಲು ಇದೊಂದೆ ಸಾಕು ಎನ್ನಬಹುದು.

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆತ್ಮ ಕಥೆಯಾದ ಅಗ್ನಿಯ ರಕ್ಕೆಗಳು(ವಿಂಗ್ಸ್ ಆಫ್ ಫೈಯರ್) ನಲ್ಲಿ ನಮ್ಮ ಜೀವನಕ್ಕೆ ಬೆಳಕಾಗುವ ಹಲವಾರು ನುಡಿಮುತ್ತುಗಳಿವೆ ಹಾಗೂ ಅವರ ಸ್ಫೂರ್ತಿದಾಯಕ ಮಾತುಗಳಿವೆ.

1. ಯಾವಾಗಲೂ ಎನನ್ನಾದರು ಕಲಿಯಲು ಉತ್ಸುಕರಾಗಿರಿ.

ಜೀವನದಲ್ಲಿ ಯಾವಾಗಲೂ ಎನನ್ನಾದರು ಕಲಿಯಲು ಉತ್ಸುಕರಾಗಿರಿ. ಜೀವನದ ಪ್ರತಿಕ್ಷಣವು ನಮ್ಮಗೆ ಕಲಿಕೆಯೇ ಹೀಗಾಗಿ ನಾವು ಕಡೆಯವರಗೆ ಕಲಿಯುವುದು ಬಹಳಷ್ಟಿರುತ್ತದೆ. ಹಾಗೂ ಸದಾಕಾಲ ಕಲಿಯುತ್ತಿರುತ್ತೇವೆ.

2. ನಿಮ್ಮ ಕನಸುಗಳನ್ನು ಹಿಂಬಾಲಿಸಿ.

ಯಾವುದಕ್ಕಾಗಿ ನಾವು ನಿದ್ದೆಗೆಟ್ಟು ಕಾಯುತ್ತೇವೆಯೋ ಅದೇ ಕನಸು. ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ನಮಗೆ ಇಷ್ಟವಿಲ್ಲದ ಕಾಟಾಚಾರಕ್ಕೆ ಕೆಲಸ ಮಾಡುವುದು ನಮ್ಮ ಕನಸನ್ನು ಕೊಲ್ಲುವುದಕ್ಕೆ ಸಮಾನ. ನಮ್ಮ ಕನಸನ್ನು ನನಸು ಮಾಡಲು ಸ್ವಲ್ಪ ಶ್ರಮ ಪಡುವ ಅವಶ್ಯಕತೆ ಇದೆ.

3. ಶಿಕ್ಷಕರಾಗಿ ಇತರರನ್ನು ಹುರಿದುಂಬಿಸಿ.

ನಾವು ಕಲಿಯುವುದರ ಜೊತೆಗೆ ಇತರರಿಗೂ ಕಲಿಸಿ ಅವರನ್ನು ಏನನ್ನಾದರು ಸಾಧಿಸಲು ಹುರಿದುಂಬಿಸಿ. ಬೇರೆಯವರು ನಿಮ್ಮಿಂದ ಸ್ಪೂರ್ತಿ ಪಡೆಯುವಂತಾಗಲಿ.

4. ಸದಾ ಶಾಂತರಾಗಿರಿ.

ನಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಶಾಂತತೆ ಬಹಳ ಮುಖ್ಯ. ಯಾವುದೇ ಸಮಯ, ಸಂದರ್ಭದಲ್ಲಿ ಶಾಂತಚಿತ್ತತೆಯನ್ನು ಕಳೆದುಕೊಳ್ಳಬೇಡಿ.

5. ನೀವು ನೀವಾಗಿರಲು ಪ್ರಯತ್ನಿಸಿ.

ನಿಮಗೆ ನಿಮ್ಮದೇ ಆದ  ವೈಶಿಷ್ಟ್ಯವಿದೆ  ಅದನ್ನು ಎಂದಿಗೂ ಕಳೆದುಕೊಳ್ಳಬೇಡಿ. ಬೇರೆಯವರ ದಾರಿಯಲ್ಲಿ ಕುರುಡರಂತೆ ಸಾಗಬೇಡಿ.

6. ಒಗ್ಗಟಗಟಿನಿಂದ ಕೆಲಸ ಮಾಡಿ.

ಒಗ್ಗಟ್ಟು ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಕೆಲಸ ಮಾಡಬೇಕಾದರೆ ಒಗ್ಗಟ್ಟು, ತಾಳ್ಮೆ, ಸಹನೆ ಬಹಳ ಮುಖ್ಯವಾಗುತ್ತದೆ.

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಮಾತು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸ್ಪೂರ್ತಿದಾಯಕ. ಅವರ ಆದರ್ಶಗಳನ್ನು ಪಾಲಿಸುವುದರಿಂದ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು