News Karnataka Kannada
Saturday, May 11 2024
ನುಡಿಚಿತ್ರ

ದುಬೈನ ಕೇಶವಿನ್ಯಾಸದಲ್ಲಿ ಕೊಡಗಿನ ಹುಡ್ಗ ಪ್ರಥಮ

Photo Credit :

ದುಬೈನ ಕೇಶವಿನ್ಯಾಸದಲ್ಲಿ ಕೊಡಗಿನ ಹುಡ್ಗ ಪ್ರಥಮ

ಮಡಿಕೇರಿ: ಕೊಡಗಿನ ಹುಡುಗನೊಬ್ಬ ದುಬೈನಲ್ಲಿ ನಡೆದ ಕೇಶವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸುವ ಮೂಲಕ ಗಮನಸೆಳೆದಿದ್ದಾರೆ.

ಕೊಡಗಿನ ಸುಂಟಿಕೊಪ್ಪದ ನಿವಾಸಿ ಸುನಿಲ್ ಭಾಸ್ಕರ ಎಂಬುವರೇ ಕೇಶ ವಿನ್ಯಾಸದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಾಗಿದ್ದಾರೆ. ಇವರು ಬ್ರಿಟೀಷ್ ಬಾರ್ಬಾರ್ಸ್ ಅಸೋಸಿಯೇಷನ್ ವತಿಯಿಂದ ಯುಎಇ(ದುಬೈ)ನಲ್ಲಿ ಇತ್ತೀಚೆಗೆ ನಡೆದ ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿ ದುಬೈನ ಕೇಶ ವಿನ್ಯಾಸಕರನ್ನು ಹಿಂದಿಕ್ಕಿ ಬಹುಮಾನಕ್ಕೆ ಪಾತ್ರರಾಗಿದ್ದಾರೆ.

ತನ್ನ 18ನೇ ವಯಸ್ಸಿನಲ್ಲಿ ಸುಂಟಿಕೊಪ್ಪದಲ್ಲಿ ಪುಟ್ಟದಾದ ಕಟ್ಟಿಂಗ್ ಸೆಲೂನ್ ಆರಂಭಿಸಿದ ಸುನಿಲ್ ಭಾಸ್ಕರ ಕೆಲಕಾಲ ಸುಂಟಿಕೊಪ್ಪದಲ್ಲಿ ಕೆಲಸ ಮಾಡಿ ಬಳಿಕ ಹೊಟ್ಟೆಪಾಡಿಗಾಗಿ  ದುಬೈ ಕಡೆಗೆ ಮುಖ ಮಾಡಿದರು. ಇದೀಗ ಕಳೆದ 13 ವರ್ಷಗಳಿಂದ ಯುನೈಟೆಡ್ ಅರಬ್ ಎಮರೇಟ್ಸ್(ದುಬೈ)ನಲ್ಲಿ  ಕೇಶ ವಿನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಕೈಚಳಕದ ಮೂಲಕ ನೈಪುಣ್ಯತೆ ಪಡೆದಿರುವ ಅವರು ಸೆಲಬ್ರೆಟಿಗಳ ಗಮನ ಸೆಳೆದಿದ್ದಾರೆ.

ಬ್ರಿಟೀಷ್ ಬಾರ್ಬಾರ್ಸ್ ಅಸೋಸಿಯೇಷನ್ ದುಬೈನಲ್ಲಿ ಆಯೋಜಿಸಿದ ದುಬೈನ ಉತ್ತಮ ಕೇಶ ವಿನ್ಯಾಸಕ ಸ್ಪರ್ಧೆಯಲ್ಲಿ ಹಲವರು ಭಾಗವಹಿಸಿದ್ದು ಅವರ ಪೈಕಿ ಅಂತಿಮ ಹಂತಕ್ಕೆ ನಾಲ್ಕು ಮಂದಿ ಸ್ಪರ್ಧೆಗಳು ಪ್ರವೇಶಿಸಿದರು. ಬಾಕ್ಸಿಂಗ್ ರಿಂಗ್ನಲ್ಲಿ ಸ್ಪರ್ಧೆಯನ್ನು ನಡೆಸಲಾಗಿದ್ದು, 45 ನಿಮಿಷದಲ್ಲಿ ಸ್ಪೀಡ್, ಟೆಕ್ನಿಕ್, ಫಿನಿಶಿಂಗ್, ಟ್ರಂಡ್ ಆಧಾರದ ಮೇಲೆ ಭಾಸ್ಕರ್ ಅವರು ಪ್ರಶಸ್ತಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ. ಆ ಮೂಲಕ ಹುಟ್ಟೂರು ಕೊಡಗಿಗೂ ಹೆಸರು ತಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು