ಕೊಡವರ ಕಕ್ಕಡ ಪದಿನೆಟ್ಟು ಆಚರಣೆ ಬಲು ಜೋರು

ಮಡಿಕೇರಿ: ಕೊಡವ ಪಂಚಾ0ಗದ ಪ್ರಕಾರ ಕಕ್ಕಡ ತಿಂಗಳಿನ 18ನೇಯ ದಿನ, ಅಂದರೆ ಸಾಮನ್ಯವಾಗಿ ಇಂಗ್ಲೀಷ ಕ್ಯಾಲೆಂಡರಿನಲ್ಲಿ ಆಗಸ್ಟ್ 3ರಂದು ಬರುತ್ತದೆ. ಆ ದಿನದಂದು ಕೊಡಗಿನ ಜನತೆ ಕಕ್ಕಡ ಪದಿನೆಟ್ಟು ಎಂಬ ಸಾಂಪ್ರದಾಯಿಕ ಹಬ್ಬವನ್ನು ಆಚರಿಸುತ್ತಾರೆ.
ದಕ್ಷಿಣ ಕನ್ನಡ, ಪಶ್ಚಿಮ ಘಟ್ಟ, ವಯನಾಡು ಹಾಗೂ ಪೂರ್ವ ನೀಲಗಿರಿಯ ಅರಣ್ಯದಲ್ಲಿ ದೊರಕುವ ಔಷಧೀಯ ಗುಣಗಳನ್ನು ಹೊಂದಿರುವ ಮದ್ದು ತೊಪ್ಪು (ಜಸ್ಟಿಸಿಯಾ ವ್ಯಾನಾಡೆನ್ಸಿಸ್) ಎಂಬ ಸಸ್ಯದ ರಸದೊಂದಿಗೆ ಅಕ್ಕಿಯನ್ನು ಬೆರೆಸಿ ಮದ್ದು ಪುಟ್ಟು ಎಂಬ ಒಂದು ಬಗೆಯ ಸಿಹಿ ಖಾದ್ಯವನ್ನು ಈ ಸಂದರ್ಭದಲ್ಲಿ ತಯಾರಿಸಲಾಗುತ್ತದೆ.
ಮದ್ದು ಪುಟ್ಟುವನ್ನು ತಯಾರಿಸಿ ಕಕ್ಕಡ ತಿಂಗಳಿನ ಹದಿನೆಂಟನೇಯ ದಿನದಂದು ಸೇವಿಸಿ ಹಬ್ಬವನ್ನು ಆಚರಿಸುತ್ತಾರೆ. ಕೊಡವರ ಪ್ರಕಾರ ಈ ಸಸ್ಯದ ರಸವತ್ತಾದ ಕಾಂಡದಲ್ಲಿ ಸುಮಾರು 18 ಬಗೆಯ ಔಷಧೀಯ ಗುಣಗಳು ಇರುತ್ತವೆ. ಇದರ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳು ಈ ಸಸ್ಯದಲ್ಲಿ ಪೊಲಿಫೆನೊಲ್ಸ್ ಮತ್ತು ಫೆವೊನೊಯಿಡ್ಸ್ ಎಂಬ ಅಂಶಗಳಿರುವುದು ಖಚಿತವಾಗಿದೆ. ಇದಲ್ಲದೇ ಈ ಸಸ್ಯದ ಔಷಧೀಯ ಗುಣಗಳ ಬಗ್ಗೆ ಗೀತಾ ಆರ್.ಜೆ, ಸುಧಾ ಮೆದಪ್ಪಾ ಹಾಗೂ ಆರ್.ವೈಷ್ಣವಿ ತಮ್ಮ ಸಂಶೋಧನೆ ‘ಫೈಟೊಕೆಮಿಕಲ್ ಮತ್ತು ಆಂಟಿಯೊಕ್ಸಿಡೆ0ಟ್ ಸ್ಕಿoನಿಂಗ್ ಆಫ್ ಜೆ.ವ್ಯಾನಡೆಸಿಸ್’ ಎಂಬ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಬಂಧ ಸೆಪ್ಟೆಂಬರ್,2011ನಲ್ಲಿ ಆಫ್ರಿಕಾದ ಪ್ಯಾಲಂಟ್ ಸೈನ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು.
ಭಾರತ ಮೂಲದ ಅಮೇರಿಕಾ ವಿಜ್ಙಾನಿ ಸುಬ್ಬಯ್ಯ(2002) ಅವರ ಪ್ರಕಾರ ಮದ್ದು ತೊಪ್ಪು ನಮ್ಮ ದೇಹದಲ್ಲಿನ ಕೊಬ್ಬಿನಾಂಶವನ್ನು ಕರಗಿಸುವಲ್ಲಿ ಸಹಕಾರಿಯಾಗಿದೆ.
ಮದ್ದು ತೊಪ್ಪುವಿನ ಎಲೆಯಿಂದ ತಯಾರಿಸಿದ ಮದ್ದು ಪುಟ್ಟು ಎಂಬ ಸಿಹಿ ಖಾದ್ಯ ತುಂಬಾ ರುಚಿಕರವಾಗಿರುತ್ತದೆ, ಅಲ್ಲದೇ ಇದನ್ನು ಸೇವಿಸಿದಾಗ ಮನುಷ್ಯನ ಮೂತ್ರ ಕೆಂಪು ಬಣ್ಣಕ್ಕೆ ತಿರುಗುವುದರಿಂದ ಮಕ್ಕಳಿಗೆ ಇದೊಂದು ಮೋಜಿನ ಸಂಗತಿಯಾಗಿದೆ. ಕೊಡವರು ಮದ್ದು ಪುಟ್ಟುವನ್ನು ತಮ್ಮ ಇತರೆ ಸ್ನೇಹಿತರಿಗೆ ತಿನ್ನಿಸಿ ತಮಾಷೆ ನೋಡುತ್ತಾರೆ. ಎಷ್ಟೋ ಬಾರಿ ಇದರ ಬಗ್ಗೆ ತಿಳಿಯದವರು ಇದನ್ನು ತಿಂದು, ಮೂತ್ರ ಕೆಂಪು ಬಣ್ಣಕ್ಕೆ ತಿರುಗಿದಾಗ ಗಾಬರಿಯಾಗಿ ವೈದ್ಯರ ಬಳಿ ಹೋಗಿರುವ ಸಂಗತಿಗಳು ನಡೆದಿರುವುದು ಕಂಡು ಬಂದಿದೆ.

Raksha Deshpande

Recent Posts

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

11 mins ago

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

21 mins ago

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

33 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

45 mins ago

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ

ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

48 mins ago

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

1 hour ago