News Karnataka Kannada
Thursday, May 02 2024
ಲೇಖನ

ತಡವಾಗಿ ವಿವಾಹವಾದರೆ ಹುಟ್ಟುವ ಮಕ್ಕಳಿಗೆ ಸಮಸ್ಯೆ ಆಗಬಹುದೆ?

Children born late in marriage are a problem!
Photo Credit : Wikipedia

ಬಹಳಷ್ಟು ಮಂದಿ ವಯಸ್ಸು ಮೀರುತ್ತಿದ್ದರೂ ಲೈಫ್ ನಲ್ಲಿ ಸೆಟ್ಲ್ ಆಗಲಿ ಆಮೇಲೆ ಮದುವೆ ಆದರಾಯಿತು ಎಂದು ತಮ್ಮ ಮದುವೆಯನ್ನು ಮುಂದೂಡುತ್ತಲೇ ಬರುತ್ತಿರುತ್ತಾರೆ. ಆದರೆ ಅಂಥವರು ಮುಂದೆ ಸಂಸಾರಿಕವಾಗಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ ಹುಡುಗರಿಗೆ ಹುಡುಗಿ ಸಿಗದ ಸಮಸ್ಯೆಗಳಿವೆ. ಮದುವೆ ವಿಚಾರದಲ್ಲಿ ಹುಡುಗಿಯರು ಕೂಡ ಕೆಲವೊಂದನ್ನು ಹುಡುಗರಿಂದ ಬಯಸುತ್ತಾರೆ. ಅಷ್ಟೇ ಅಲ್ಲದೆ ತನಗೆ ಇಷ್ಟವಾಗುವ ಮತ್ತು ಲೈಫ್ ನಲ್ಲಿ ಸೆಟ್ಲ್ ಆಗಬಹುದು ಎನ್ನುವುದಾದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಹುಡುಗಿಯನ್ನು ಹುಡುಕಿ ಮದುವೆ ಆಗುವ ಹೊತ್ತಿಗೆ ವಯಸ್ಸು ಓಡಿರುತ್ತದೆ. ಮೂವತ್ತರಿಂದ ನಲವತ್ತರ ಆಸುಪಾಸಿನ ಬಹುತೇಕ ಹುಡುಗರು ಇವತ್ತಿಗೂ ಹುಡುಕುವುದರಲ್ಲಿಯೇ ಇರುವುದನ್ನು ಕಾಣಬಹುದಾಗಿದೆ.

ಇದು ಮದುವೆಯಾಗುವಲ್ಲಿ ತಡವಾಗುತ್ತಿರುವುದಕ್ಕೆ ಕಾರಣವಾಗುತ್ತಿದ್ದರೆ, ಇದರಾಚೆಗೆ ಕೆಲವರು ಮದುವೆ ಆದ ಮೇಲೆ ಒಂದಷ್ಟು ವರ್ಷ ಜಾಲಿಯಾಗಿರೋಣ ಲೈಫ್ ನಲ್ಲಿ ಸಂಪಾದನೆ ಮಾಡಿಕೊಂಡು ಮತ್ತೆ ಮಗು ಪಡೆಯೋಣ ಎಂದುಕೊಳ್ಳುತ್ತಾರೆ. ಈ ರೀತಿ ಮಾಡುವುದು ತಪ್ಪು ಎನ್ನುತ್ತಾರೆ ವೈದ್ಯರು. ಇವತ್ತಿನ ಪರಿಸ್ಥಿತಿಯಲ್ಲಿ ವಯಸ್ಸಾದ ಬಳಿಕ ಮಗು ಪಡೆಯುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕೆಲವರಿಗೆ ತಡವಾಗಿ ವಿವಾಹವಾಗುತ್ತಿರುವುದರಿಂದಲೇ ಬಂಜೆತನ ಕಾಣಿಸಿಕೊಳ್ಳುತ್ತಿದೆ.

ವೈದ್ಯರ ಪ್ರಕಾರ ವಯಸ್ಸು ಮೀರಿದ ಬಳಿಕ ಮಗುವನ್ನು ಪಡೆಯುತ್ತೇವೆ ಎಂಬ ನಿರ್ಧಾರಕ್ಕೆ ಬರುವುದು ಒಳ್ಳೆಯ ತೀರ್ಮಾನವಲ್ಲ. ವೈದ್ಯರು ಹೇಳುವಂತೆ ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ವಂಶಾವಳಿಯ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳಾಗಿವೆ. ಅಂದರೆ, ತಂದೆಗೆ ವಯಸ್ಸಾಗುತ್ತಿದ್ದಂತೇ ಹುಟ್ಟುವ ಮಗುವಿಗೆ ಮುಂದೆ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಿಂಡ್ರೋಮ್‌ಗಳು ಕಾಣಿಸಿಕೊಳ್ಳಬಹುದಂತೆ. ಈ ವಿಷಯವನ್ನು ಆಳವಾಗಿ ನೋಡುವುದಾದರೆ, ತಂದೆಯಾಗುವ ಪ್ರಕ್ರಿಯೆಯಲ್ಲಿ ವಯಸ್ಸಾದಂತೆ ಹುಟ್ಟುವ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಅಧ್ಯಯನದ ಪ್ರಕಾರ 30-34 ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45ವಯಸ್ಸಿನಲ್ಲಿ ತಂದೆಯಾದರೆ ಅಂಥವರಲ್ಲಿ 1000ಕ್ಕೆ 4 ಅಥವಾ 5 ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37ಮಕ್ಕಳಿಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ! ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವ ಅನೇಕ ತೊಂದರೆಗಳಿಗೆ ತಂದೆಯಾಗುವಾಗಿನ ವಯಸ್ಸು 40 ದಾಟಿರುವುದೇ ಮುಖ್ಯ ಕಾರಣವಂತೆ.

ಇವತ್ತಿನ ಲೈಫ್ ಸ್ಟೈಲ್ ಗಳಿಂದ ಕೆಲವೊಂದು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಅದರಲ್ಲೂ ನಮ್ಮ ನಡುವಿನ ದಾಂಪತ್ಯದಲ್ಲಿ ಸಮಸ್ಯೆಗಳಾದರೆ ಅದರಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿಲ್ಲ. ಹಣ ಆಸ್ತಿಗಳನ್ನು ಯಾವತ್ತು ಬೇಕಾದರೂ ಗಳಿಸಿಕೊಳ್ಳಬಹುದು. ಆದರೆ ಕಳೆದುಹೋದ ವಯಸ್ಸು ಮತ್ತು ಆರೋಗ್ಯವನ್ನು ಕಳೆದು ಕೊಂಡರೆ ಅದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಜತೆಗೆ ತಂದೆಯಾಗಲು ಬೇಕಾದ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. ಆದ್ದರಿಂದ ಮದುವೆಯಾದ ಬಳಿಕ ಕುಟುಂಬ ಯೋಜನೆಯ ಯಾವುದೇ ಕ್ರಮವನ್ನು ಅನುಸರಿಸದೇ ಬೇಗ ಮಗುಪಡೆಯಲು ತೀರ್ಮಾನ ಮಾಡುವುದು ಒಳ್ಳೆಯದು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು