News Karnataka Kannada
Tuesday, May 07 2024
ವಿಶೇಷ

ಮಂಗಳೂರು: ದಸರಾಕ್ಕೆ ವಿದ್ಯುತ್ ದೀಪಾಲಂಕೃತಗೊಂಡ ಕಡಲ ನಗರಿ ಕುಡ್ಲ! 

Dasara
Photo Credit : News Kannada

ಮಂಗಳೂರು: ನಾಡಿನಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ದೇಶ – ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಮಂಗಳೂರು ದಸರಾ ಕಳೆಗಟ್ಟಿದೆ. ಇಡೀ ಮಂಗಳೂರು ನಗರವೇ ವಿದ್ಯುತ್ ದೀಪಾಲಂಕೃತಗೊಂಡು ಶೋಭಾಯಮಾನವಾಗಿ ಬೆಳಗುತ್ತಿದ್ದು, ಅಬ್ಬಬ್ಬಾ ಇದೇನಾ ಕರಾವಳಿ ನಗರಿ ಎನ್ನುವ ಮಟ್ಟಿಗೆ ಅಲಂಕಾರಗೊಂಡಿದೆ.

ಶ್ರೀ ಕ್ಷೇತ್ರ ಕುದ್ರೋಳಿಯಿಂದ ಆಯೋಜನೆಗೊಳ್ಳುತ್ತಿರುವ ಈ ಮಂಗಳೂರು ದಸರಾ ಹಿನ್ನೆಲೆಯಲ್ಲಿ ಕುದ್ರೋಳಿ ದೇವಸ್ಥಾನದಿಂದ ಹಿಡಿದು ಮಂಗಳೂರಿನ ಪ್ರಮುಖ ರಸ್ತೆಗಳೆಲ್ಲವೂ ಸಂಪೂರ್ಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ರಾತ್ರಿಯಾಗುತ್ತಿದ್ದಂತೆ ಇಡೀ ನಗರವೇ ಬೆಳಕಿನ ಲೋಕದಂತೆ ಬೆಳಗುತ್ತಿದೆ‌. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಸಂಪೂರ್ಣ ವಿದ್ಯುತ್ ದೀಪಾಲಂಕೃತಗೊಂಡು ಭಕ್ತರ, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಮಂಗಳೂರು ದಸರಾ ಹಿನ್ನೆಲೆ ಶಾರದಾ ಮಾತೆಯ ಶೋಭಾಯಾತ್ರೆ ಸಾಗುವ ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಕಳೆದ ವರ್ಷದಿಂದ ಮಂಗಳೂರು ಮಹಾನಗರ ಪಾಲಿಕೆ ಮಾಡುತ್ತಿದೆ. ಈ ಬಾರಿಯೂ ದಾರಿಯುದ್ದಕ್ಕೂ 92 ಲಕ್ಷ ರೂ‌. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳು ವಿದ್ಯುತ್ ದೀಪಾಲಂಕೃತಗೊಂಡು ಕಂಗೊಳಿಸುತ್ತಿದೆ. ಒಟ್ಟಿನಲ್ಲಿ ಇಡೀ ಮಂಗಳೂರು ನಗರಿ ದಸರಾದ 10 ದಿನಗಳ ಕಾಲ ಧರೆಗಿಳಿದ ಬೆಳಕಿನ ಲೋಕದಂತೆ ಕಂಗೋಳಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು