News Karnataka Kannada
Tuesday, April 30 2024
ವಿಶೇಷ

ಐಫೋನ್ 15 ಸರಣಿ ರಿಲೀಸ್ ಡೇಟ್ ಘೋಷಿಸಿದ ಆ್ಯಪಲ್

Apple announces iPhone 15 series launch date
Photo Credit : News Kannada

ಆ್ಯಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸರಣಿಯ ಸ್ಮಾರ್ಟ್​ಫೋನ್​ಗಳ ರಿಲೀಸ್ ಡೇಟ್ ಘೋಷಣೆ ಆಗಿದೆ. ಮುಂದಿನ ಪೀಳಿಗೆಯ ಐಫೋನ್ 15 ಸರಣಿ ಸ್ಮಾರ್ಟ್‌ಫೋನ್‌ಗಳು ಸೆ.12 ರಂದು ಬಿಡುಗಡೆಯಾಗಲಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ.

ಐಫೋನ್ 15 ಸರಣಿಯಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನುಗಳು ಇರಲಿದೆ. ಇದರ ಜೊತೆಗೆ ಟೆಕ್ ದೈತ್ಯ ಆ್ಯಪಲ್ ತನ್ನ ವಾಚ್ ಸರಣಿ 9 ರ ಹೊಸ ಸೆಟ್ ಅನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಐಫೋನ್ 15 ಮಾದರಿಗಳು ದೊಡ್ಡ ಬ್ಯಾಟರಿ ಪವರ್ ಅನ್ನು ಹೊಂದಿವೆಯಂತೆ. ಸ್ಟ್ಯಾಂಡರ್ಡ್ ಮಾಡೆಲ್ 3,877mAh ಬ್ಯಾಟರಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಇದು ಐಫೋನ್ 14 ನಲ್ಲಿ ಕಂಡುಬರುವ 3,279mAh ಯುನಿಟ್‌ಗಿಂತ ದೊಡ್ಡ ಅಪ್‌ಗ್ರೇಡ್ ಆಗಿರುತ್ತದೆ. ಆ್ಯಪಲ್ ಫಾಸ್ಟ್ ಚಾರ್ಜರ್ ಕೂಡ ನೀಡಬಹುದು ಎಂಬ ಮಾತಿದೆ. ಇದು 35W ವೇಗದ ಚಾರ್ಜ್‌ಗ್​ನಿಂದ ಕೂಡಿದೆ.

ಐಫೋನ್ 15 USA ನಲ್ಲಿ 66 ಸಾವಿರ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು