News Karnataka Kannada
Monday, April 29 2024
ವಿಶೇಷ

ಮುಂಬೈ: ಕಚೇರಿ ಕೆಲಸದ ವೇಳೆ ನಿದ್ರಿಸುವ ವಿಚಾರದಲ್ಲಿ ಮುಂಬೈ ಮಹಿಳೆಯರು ಮುಂದೆ

Mumbai women come forward when it comes to sleeping while working in office
Photo Credit : IANS

ಮುಂಬೈ: ಶೇ 61 ಮುಂಬೈ ನಿವಾಸಿಗಳು ಕೆಲಸದ ವೇಳೆ ನಿದ್ರೆ ಮಾಡುವ ಸಮಸ್ಯೆಯಿಂದ ಬಳುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಸ್ಲೀಪ್ ಸೊಲ್ಯೂಷನ್ಸ್ ಪ್ರೊವೈಡರ್ ನಡೆಸಿದ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ (GISS) ಸಮೀಕ್ಷೆಯು ಭಾರತೀಯರಲ್ಲಿ ನಿದ್ರೆಯ ಮಾದರಿಗಳು ಮತ್ತು ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ.

ಮುಂಬೈ ಅನ್ನು ‘ಎಂದಿಗೂ ಮಲಗದ ನಗರ’ ಎಂದು ಕರೆಯಲಾಗಿದ್ದರೂ, ಇಲ್ಲಿ ಶೇಕಡಾ 70 ರಷ್ಟು ಜನರು ರಾತ್ರಿ 11 ಗಂಟೆಯ ನಂತರ ನಿದ್ರೆಗೆ ಮೊರೆಹೋಗುತ್ತಾರೆ. ಶೇಕಡಾ 49 ರಷ್ಟು ಜನರು ಎಚ್ಚರವಾದಾಗ ನಿದ್ದೆಯ ಬಳಿಕ ಪಡೆಯುವ ಉಲ್ಲಾಸವನ್ನು ಹೊಂದಿರುವುದಿಲ್ಲ ಎಂದು ವರದಿ ತಿಳಿಸಿದೆ.

ಕುತೂಹಲಕಾರಿ ಅಂಶವೆಂದರೆ ಶೇ 61 ರಷ್ಟು ಮಂದಿ ಮುಂಬೈಗರು ಕೆಲಸದ ಅವಧಿಯಲ್ಲಿ ನಿದ್ರಿಸುತ್ತಾರೆ ಎನ್ನಲಾಗಿದೆ. ಈ ಪೈಕಿ ಶೇ.57 ಪುರುಷರು, ಶೇ 67 ರಷ್ಟು ಮಹಿಳೆಯರಿದ್ದಾರೆ.

2022 ಕ್ಕೆ ಹೋಲಿಸಿದರೆ ಈ ವರ್ಷ ಬೆಳಿಗ್ಗೆ ಎದ್ದ ನಂತರ ‘ದಣಿದ ಭಾವನೆಯ ಅಂಶ ಶೇ 34ರಷ್ಟು ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.
ರಾತ್ರಿಯ ವೇಳೆ ಸಮರ್ಪಕ ನಿದ್ರೆ ಇಲ್ಲದಿರುವುದು ಕೆಲಸದ ವೇಳೆ ನಿದ್ರೆ ತೂಗುವ ಸಮಸ್ಯೆ ಕಾರಣ. ಅಲ್ಲದೇ ಮಲಗುವ ಕೋಣೆ ವಾತಾವರಣವೂ ನಿದ್ರಾಹೀನತೆಗೆ ಕಾರಣವಾಗಿದೆ.

ಮುಂಬೈ ವೈದ್ಯೆ ಡಾ. ಹಿಮಾಂಶು ಷಾ ಈ ಬಗ್ಗೆ ವಿವರಿಸಿದ್ದು, ಕುಟುಂಬದ ಭವಿಷ್ಯದ ಭಯ, ಉದ್ಯೋಗ ಅಭದ್ರತೆ ಇತ್ಯಾದಿ ವಿಷಯಗಳು ನಿದ್ರಾಹೀನತೆ, ಅಸಮರ್ಪಕ ನಿದ್ರೆಗೆ ಕಾರಣ ಎಂದು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು