News Karnataka Kannada
Friday, May 10 2024
ಅಂಕಣ

ಕಲ್ಲಂಗಡಿ ಹಣ್ಣಿನಲ್ಲಿದೆ ಸೌಂದರ್ಯ ವೃದ್ಧಿಸುವ ಗುಣ

Watermelon has beauty enhancing properties
Photo Credit : Freepik

ಕಲ್ಲಂಗಡಿ ಹಣ್ಣು ಎಂದಾಗ ತಕ್ಷಣಕ್ಕೆ ಎಲ್ಲರಿಗೂ ಕಲ್ಲಂಗಡಿ ಹಣ್ಣಿನ ಜ್ಯೂಸ್ ನೆನಪಾಗಬಹುದು. ಅದರಲ್ಲೂ ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿನ ಜ್ಯೂಸ್ ಗೆ ಬೇಡಿಕೆ ಹೆಚ್ಚು ಏಕೆಂದರೆ ಈ ಜ್ಯೂಸ್ ಕುಡಿದರೆ ದೇಹವನ್ನು ತಂಪು ಮಾಡುತ್ತದೆ. ಇದರ ಜೊತೆಗೆ ಕಲ್ಲಂಗಡಿ ಹಣ್ಣು ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದೆ. ಕಲ್ಲಂಗಡಿ ಹಣ್ಣಿನ ತಿರುಳನ್ನು ಅರೆದು ದಪ್ಪನೆಯ ಲೇಪನ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಕ್ರಮೇಣ ಹೆಚ್ಚಾಗುತ್ತದೆ. ‌ಕಲ್ಲಂಗಡಿ ತಿರುಳನ್ನು ಮೊಸರಿನೊಂದಿಗೆ ಬೆರೆಸಿ ಲೇಪನ ಮಾಡಿ ಅದನ್ನು ಕುತ್ತಿಗೆ ಭಾಗಕ್ಕೆ ಮತ್ತು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆದುಕೊಂಡರೆ ಮುಖದ ಸೌಂದರ್ಯ ವೃದ್ಧಿಯಾಗುತ್ತದೆ.

ಕಲ್ಲಂಗಡಿ ಹಣ್ಣಿನ ತಿರುಳನ್ನು ತುರಿದು ಅದಕ್ಕೆ ಕಡ್ಲೆಹಿಟ್ಟು ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಡಿ ನಂತರ ಮುಖವನ್ನು ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಿ, ಹೀಗೆ ಮಾಡುವುದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗುತ್ತದೆ.

ಕಲ್ಲಂಗಡಿ ಹಣ್ಣಿನ ರಸ ಮತ್ತು ಸೌತೆಕಾಯಿ ತಿರುಳು ಎರಡನ್ನು ಸೇರಿಸಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಟ್ಟು ನಂತರ ಮುಖ ತೊಳೆಯಬೇಕು.

ಕಲ್ಲಂಗಡಿ ಹಣ್ಣಿನ ತಿರುಳು ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಆ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಬೇಕು. ಇದರಿಂದ ನಿಮ್ಮ ಮುಖದ ಅಂದ ಹೆಚ್ಚುತ್ತದೆ.

ಮುಖದ ಕಾಂತಿ ಹೆಚ್ಚಿಸಲು ಕಲ್ಲಂಗಡಿ ಹಣ್ಣಿನ ತಿರುಳು, ಮೊಸರು ಮತ್ತು ಸ್ವಲ್ಪ ರಕ್ತಚಂದನ ಎಣ್ಣೆ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಿ.

ಕಲ್ಲಂಗಡಿ ಹಣ್ಣು, ಗುಲಾಬಿ ರಸ, ಬಾದಾಮಿ ಪುಡಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚೋದರಿಂದ ಒಣ ಚರ್ಮ ಇರುವವರಿಗೆ ಉತ್ತಮ ರಿಸಲ್ಟ್ ಕೊಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು