Categories: ಅಂಕಣ

ಹೊಳೆಯುವ ತ್ವಚೆಗಾಗಿ ಬಳಸಿ ಚಿಕ್ಕು ಫೇಸ್ ಪ್ಯಾಕ್

ಎಲ್ಲಾ ಮಹಿಳೆಯರಿಗೂ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಮುಖದಲ್ಲಿ ಸಣ್ಣ ಮೊಡವೆ ಬಿದ್ದರು ಅದನ್ನು ಸಹಿಸದವರು ಇದ್ದಾರೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ದಿನಕಳೆದಂತೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಅದರಲ್ಲೂ ಯೌವನದಲ್ಲಿ ಮುಖದ ಮೇಲೆ ಮೊಡವೆಗಳು, ಬ್ಲಾಕ್ಹೆಡ್ ಸಮಸ್ಯೆ ಮತ್ತು ಇನ್ನಿತರ ತೊಂದರೆಗಳು ಕಂಡು ಬರಲು ಆರಂಭವಾಗಿ, ಮುಖದ ಸೌಂದರ್ಯ ಹಾಳಾಗುವುದು ಮಾತ್ರವಲ್ಲದೆ ಚರ್ಮದ ಕಾಂತಿಯು ಕಳೆದುಕೊಳ್ಳುತ್ತಾ ಬರುತ್ತದೆ.

ಮುಖದಲ್ಲಿ ಸಮಸ್ಯೆಗಳು ಕಂಡು ಬಂದಾಗ ನಾವು ಸಾಮಾನ್ಯವಾಗಿ ಮಾರ್ಕೆಟ್ ಗಳಲ್ಲಿ ಸಿಗುವ ಫೇಸ್ ಕ್ರೀಮ್, ಫೇಸ್ ವಾಶ್, ಫೇಸ್ ಸ್ಕ್ರಬ್ ಗಳನ್ನು ಬಳಕೆ ಮಾಡುತ್ತೇವೆ ಇದರಿಂದ ನಿರೀಕ್ಷಿತ ರೀತಿಯಲ್ಲಿ ನಾವು ರಿಸಲ್ಟ್ ಪಡೆಯಲು ಸಾದ್ಯವಾಗುವುದಿಲ್ಲ. ಇನ್ನು ಕೆಲವೊಂದು ಪ್ರಾಡಕ್ಟ್ ಬಳಸಿದಾಗ ನೆಗೆಟಿವ್ ರಿಯಾಕ್ಷನ್ ಆಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ನೀವೆ ಮನೆಯಲ್ಲಿ ಫೇಸ್ ಪ್ಯಾಕ್, ಫೇಸ್ ಸ್ಕ್ರಬ್ ತಯಾರಿಸಿಕೊಂಡು ಬಳಕೆ ಮಾಡಿಕೊಳ್ಳುವುದು ಉತ್ತಮ. ಚಿಕ್ಕು ಫೇಸ್ ಪ್ಯಾಕ್‌ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದಕ್ಕಾಗಿ ಮೊದಲು ಚಿಕ್ಕು ಹಣ್ಣಿನ ಬೀಜವನ್ನು ಅರೆದು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ, ಪೇಸ್ಟ್ ಮಾಡಿ. ನಂತರ ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಒಣಗಲು ಬಿಡಿ. ಅನಂತರ ಮುಖವನ್ನು ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಕ್ರಮೇಣ ಹೆಚ್ಚುತ್ತದೆ.

ಚಿಕ್ಕು ಹಣ್ಣಿನ ತಿರುಳಿಗೆ, ರೋಸ್ ವಾಟರ್ ( ಗುಲಾಬಿ ನೀರು) ಶ್ರೀಗಂಧದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಮುಖ, ಕುತ್ತಿಗೆಗೆ ಚೆನ್ನಾಗಿ ಹಚ್ಚಿ ಒಣಗಿದ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಸುಕ್ಕು ನಿವಾರಣೆಯಾಗಿ ಮುಖದ ಅಂದ ಹೆಚ್ಚುತ್ತದೆ.

ಚಿಕ್ಕು ಹಣ್ಣಿನ ತಿರುಳಿಗೆ ಹಾಲು, ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಒಣಗಿದ ಬಳಿಕ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

Gayathri SG

Recent Posts

ವಾಸವಿ ಯುವಜನ ಸಂಘದ ವತಿಯಿಂದ ಪ್ರಸಾದ ವಿತರಣೆ

ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…

2 mins ago

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

9 mins ago

ಮೊಬೈಲ್ ವಿಚಾರಕ್ಕೆ ಹಲ್ಲೆ: ಆರೋಪಿಗಳು ವಶಕ್ಕೆ

ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ.

14 mins ago

ಅಂಜಲಿ ಹತ್ಯೆ ಪ್ರಕರಣ: ನನ್ನ ಮಗನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದ ಆರೋಪಿ ಗಿರೀಶ್ ತಾಯಿ

ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…

33 mins ago

ಸ್ವಾತಿ ಹಲ್ಲೆ ಪ್ರಕರಣ : ಹೊಸ CCTV ಫೂಟೇಜ್ ಬಿಡುಗಡೆ ಮಾಡಿದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…

34 mins ago

ಮರಕ್ಕೆ ಕಾರು ಡಿಕ್ಕಿ: ನಾಲ್ವರು ಕಾನೂನು ವಿದ್ಯಾರ್ಥಿಗಳು ಮೃತ್ಯು

ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…

55 mins ago