News Karnataka Kannada
Sunday, May 05 2024
ಅಂಕಣ

ಸಾಂಪ್ರದಾಯಿಕ ಸೀರೆಗೆ ಟ್ರೆಂಡೀ ಲುಕ್, ಪ್ಯಾಂಟ್‌ ಸಾರಿ

Trendy look for a traditional saree, pants saree
Photo Credit : Twitter

ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ ಸೀರೆ. ಈ ಸಾಂಪ್ರದಾಯಿಕ ಸೀರೆಯೂ ಇಂದು ಟ್ರೆಂಡೀ ಲುಕ್ ನೊಂದಿಗೆ ಬದಲಾವಣೆ ಕಂಡುಕೊಂಡಿದೆ. ಹಿಂದೆ ಸೀರೆ ಉಡುತಿದ್ದದ್ದಕ್ಕೂ ಇಂದಿನ ಸೀರೆ ಉಡುವ ಸ್ಟೈಲ್ ಗೂ ವ್ಯತ್ಯಾಸಗಳು ಕಾಣಬಹುದು. ಇಂದು ಪ್ಯಾಂಟ್ ತೊಟ್ಟು ಸಾರಿ ಉಡುವ ಟ್ರೆಂಡೀ ಪ್ಯಾಶನ್ ಬಂದಿದೆ. ಇದಕ್ಕೆ ಸಿನಿಮಾ ತಾರೆಯರು ಅದರಲ್ಲೂ ಹಿಂದಿ ಸಿನಿಮಾ ರಂಗದ ತಾರೆಯರು ಈ ಪ್ಯಾಶನ್ ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಒಂದು ಕಾಲದಲ್ಲಿ ಸೀರೆಯೂ ಲೆಹಂಗಾ ಎಂಬ ಹೊಸ ಹೆಸರಿನೊಂದಿಗೆ ಹೊಸ ಶೈಲಿಯೊಂದಿಗೆ ಮಾರುಕಟ್ಟೆಗೆ ಬಂದಿತು. ಆದರೆ ಈಗ ಬಟ್ಟೆ ಅಂಗಡಿಗಳಲ್ಲಿ ಪ್ಯಾಂಟ್‌ ಸಾರಿ ಸಂಚಲನ ಸೃಷ್ಟಿಸುತ್ತಿದೆ.

ವಿಶೇಷ ಕಾರ್ಯಕ್ರಮಗಳಲ್ಲಿ ಸಾರಿಯನ್ನು ಉಡಲು ಈಗಿನ ಯುವತಿಯರು ಬ್ಯೂಟಿ ಪಾರ್ಲರ್ ಗಳೀಗೆ ಹೋಗುತ್ತಾರೆ. ಆದರೆ ಈ ಪ್ಯಾಂಟ್ ಸಾರಿ ಉಡಲು ನೀವು ಎಲ್ಲಿಗೂ ಹೋಗಬೇಕಾದ ಸಂದರ್ಭ ಬರೊದಿಲ್ಲ. ಏಕೆಂದರೆ ಈ ಪ್ಯಾಂಟ್ ಸಾರಿಯನ್ನು ಸುಲಭವಾಗಿ ಯಾರ ಸಹಾಯವನ್ನೂ ಕೇಳದೆ ನೀವೇ ಮನೆಯಲ್ಲಿ ಉಡಬಹುದು.

ಈ ಪ್ಯಾಂಟ್ ಸಾರಿ ಯುವತಿಯರು ಹೆಚ್ಚು ಆಕರ್ಷಿತರಾಗಲು ಕಾರಣ ಸಿನಿಮಾ ತಾರೆಯರು, ಏಕೆಂದರೆ ಈ ಪ್ಯಾಂಟ್‌ ಸಾರಿ ಮೊದ ಮೊದಲು ಯುವತಿಯರಿಗೆ ಅಷ್ಟೊಂದು ಇಷ್ಟದ ಧಿರಿಸಾಗಿ ಕಣ್ಮನ ಸೆಳೆದಿರಲಿಲ್ಲ. ಆದರೆ ಯಾವಾಗ ರೂಪದರ್ಶಿಗಳು ಈ ಹೊಸ ಮಾದರಿಯ ಸೀರೆಯನ್ನುಟ್ಟು ರ್ಯಾಂಪ್ ವಾಕ್ ಮಾಡಿದರೋ , ಅಂದಿನಿಂದ ಯುವತಿಯರ ಗಮನ ಹೆಚ್ಚು ಸೆಳೆಯಿತು. ಸೆಲೆಬ್ರಿಟಿ ಲುಕ್‌ ನೀಡುವ ಈ ಸೀರೆಯನ್ನೂ ಧರಿಸಿ ನೋಡುವ ಮನಸ್ಸಾಯಿತು. ಅದಕ್ಕಾಗಿಯೇ ಪ್ಯಾಂಟ್‌ ಸಾರಿಗೆ ನಗರಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದರೆ ತಪ್ಪಾಗದು.

ಈ ಪ್ಯಾಂಟ್ ಸಾರಿಗಳು ಸ್ಟೇಜ್ ಪ್ರೋಗ್ರಾಮ್ ಗಳಿಗೆ ಹೆಚ್ಚು ಸೂಕ್ತ ಎನ್ನಬಹುದು. ಆದರೆ ಹಬ್ಬ, ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ತೆರಳುವಾಗೆಲ್ಲ ಅಷ್ಟೊಂದು ಸಮಂಜಸ ಧಿರಿಸು ಅಲ್ಲ. ಇನ್ನು ಈ ಪ್ಯಾಂಟ್ ಸಾರಿಯನ್ನು ಉಡಲು ತುಂಬ ಸಮಯದ ಅವಶ್ಯಕತೆ ಇಲ್ಲ. ಕಡಿಮೆ ಸಮಯದಲ್ಲಿ ಉಡಬಹುದು.

ಈ ಪ್ಯಾಂಟ್‌ ಸಾರಿಯು ಅಟ್ಯಾಚ್‌ಡ್‌ ಅಲ್ಲ. ಪ್ಯಾಂಟ್‌, ಬ್ಲೌಸ್‌ ಮತ್ತು ಸೀರೆ ಪ್ರತ್ಯೇಕವಾಗಿಯೇ ಇರುತ್ತದೆ. ಟೀ ಶರ್ಟ್‌ ಮಾದರಿಯ ಬ್ಲೌಸ್‌ ಮತ್ತು ಲೆಗ್ಗಿನ್ಸ್‌ ಮಾದರಿಯ ಪ್ಯಾಂಟನ್ನು ಮಾಮೂಲಿ ಪ್ಯಾಂಟ್‌ ನಂತೆಯೇ ಧರಿಸಿಕೊಳ್ಳಬೇಕು. ಬಳಿಕ ಸೀರೆಯನ್ನು ಪ್ಯಾಂಟ್‌ನ ಒಂದು ಬದಿಗೆ ಸಿಕ್ಕಿಸಿಕೊಳ್ಳಬೇಕು. ಬಳಿಕ ಸೆರಗು ನೆರಿಗೆ ಹಿಡಿದು ಪಿನ್‌ ಮಾಡಬೇಕು. ಕಾಲಿನ ಭಾಗದ ನೆರಿಗೆಯು ಒಂದು ಭಾಗಕ್ಕೆ ಮಾತ್ರ ಹಾಕಿಕೊಳ್ಳಬೇಕು. ಬಲಗಾಲಿನ ಪ್ಯಾಂಟ್‌ ನ್ನು ಕವರ್‌ ಮಾಡಿಕೊಳ್ಳಬಾರದು. ಇದು ಪ್ಯಾಂಟ್‌ ಸೀರೆಯ ಸ್ಟೈಲ್‌ ಆಗಿದ್ದು, ಯುವತಿಯರಿಗೆ ಟ್ರೆಂಡೀ ಲುಕ್ ನೀಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು